ಮೌಲ್ವಿ ಹೊರಡಿಸಿದ ಪತ್ವಾಕ್ಕೆ ಸಡ್ಡು ಬಡಿದ ಸೋನು ನಿಗಮ್
ನವದೆಹಲಿ: ಪಶ್ಚಿಮ ಬಂಗಾಳ ಅಲ್ಪಸಂಖ್ಯಾತ ಒಕ್ಕೂಟದ ಉಪಾಧ್ಯಕ್ಷರಾದ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಅವರ ₹ 10 ಲಕ್ಷ ಬಹುಮಾನ ನೀಡುವುದಾಗಿ ಪತ್ವಾ ಹೊರಡಿಸಿದ್ದರು ಇದಕ್ಕೆ ಪ್ರತಿಕ್ರಿಯೆಯಾಗಿ ಗಾಯಕ ಸೋನು ನಿಗಮ್ ಅವರು ಬುಧವಾರ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.
ವಿವಾದದ ಕುರಿತು ಸ್ಪಷ್ಟನೆ ನೀಡಲು ಸೋನು ನಿಗಮ್ ಬುಧವಾರ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ನಾನು ಮೊಹಮ್ಮದ್ ರಫಿಯನ್ನು ನನ್ನ ಗುರು ಎಂದು ಭಾವಿಸಿದ್ದೇನೆ. ನನ್ನ ಕಾರಿನ ಡ್ರೖೆವರ್ ಸಹ ಓರ್ವ ಮುಸ್ಲೀಂ, ನಾನು ಮುಸ್ಲೀಂ ವಿರೋಧಿಯಲ್ಲ. ನಾನು ಸಾಮಾಜಿಕ ನೆಲೆಗಟ್ಟಿನಲ್ಲಿ ಆಜಾನ್ ಕುರಿತು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಧಾರ್ಮಿಕ ನೆಲೆಗಟ್ಟಿನಲ್ಲಿ ನಾನು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ನಾನೊಬ್ಬ ಜಾತ್ಯಾತೀತ ವ್ಯಕ್ತಿ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯ ಮಧ್ಯದಲ್ಲಿ ಬ್ರೇಕ್ ತೆಗೆದುಕೊಂಡ ಸೋನು ನಿಗಮ್ ಬಾಲಿವುಡ್ನ ಖ್ಯಾತ ಕೇಶ ವಿನ್ಯಾಸಕ ಅಲೀಮ್ ಹಕ್ಕೀಮ್ ಅವರಿಂದ ತಲೆ ಬೋಳಿಸಿಕೊಂಡರು. ಆ ನಂತರ ಈ ಕುರಿತು ಸ್ಪಷ್ಟನೆ ನೀಡಿದ ಸೋನು ನಿಗಮ್ ತಾವು ಯಾವುದೇ ಪ್ರತಿಕಾರದ ಕ್ರಮವಾಗಿ ತಲೆ ಬೋಳಿಸಿಕೊಂಡಿಲ್ಲ. ನನ್ನ ತಲೆ ಬೋಳಿಸಿದ ವ್ಯಕ್ತಿ ಸಹ ಓರ್ವ ಮುಸ್ಲೀಂ ಎಂದು ತೋರಿಸಲು ನಾನು ಈ ಕೆಲಸ ಮಾಡಿದ್ದೇನೆ ಅಷ್ಟೇ. ಈ ಮೂಲಕ ನಾನು ಯಾವುದೇ ವಿವಾದಕ್ಕೂ ನಾಂದಿ ಹಾಡುತ್ತಿಲ್ಲ. ಕೊನೆಯಲ್ಲಿ ‘ಆಜಾನ್ ಬೇಕು ಆದರೆ ಧ್ವನಿವರ್ಧಕ ಬೇಕಾಗಿಲ್ಲ’ ಎಂದು ಸೋನು ನಿಗಮ್ ತಮ್ಮ ನಿಲುವಿನ ಕುರಿತು ಸ್ಪಷ್ಟನೆ ನೀಡಿದರು.
loading...
No comments