Breaking News

ಪಾಪ್ಯುಲರ್ ಫ್ರಂಟ್ ಇಂಡಿಯಾ ಕಾರ್ಯಕರ್ತರ ಮೇಲೆ ಲಾಠಿ ಬಿಸಿದ ಮಂಗಳೂರು ಖಾಕಿ ಪಡೆ


ಮಂಗಳೂರು : ಯಾವುದೇ ಪೂರ್ವ ಅನುಮತಿ ಇಲ್ಲದೆ  ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ ಘಟನೆ ಇಂದು ನಗರದಲ್ಲಿ ವರದಿ ಆಗಿದೆ . ಘಟನೆಯಲ್ಲಿ ಪೊಲೀಸರು ಸೇರಿ  ಹಲವರು ಮಂದಿ ಪಾಪ್ಯುಲರ್ ಫ್ರಂಟ್ ಇಂಡಿಯಾ ಕಾರ್ಯಕರ್ತರು  ಗಾಯಗೊಂಡಿದ್ದು 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ .ಪಾಪ್ಯುಲರ್ ಫ್ರಂಟ್ ಇಂಡಿಯಾ ಪ್ರತಿಭಟನೆ ನಡೆಸಲು ಕಾರಣವಾದರು ಏನು

ದಿನಾಂಕ: 21-02-2016 ರಂದು ಜೋಕಟ್ಟೆ ಕೋಡಿಕೆರೆ ನಿವಾಸಿ ಶ್ರೀ ಪ್ರಕಾಶ್ ಪೂಜಾರಿ ಅವರು  ಎಂ ಆರ್ ಪಿ ಎಲ್ ಕಾರಿಡಾರ್ ರಸ್ತೆಯಲ್ಲಿ ಕಳವಾರು ರಸ್ತೆಗೆ ಹೋಗುತ್ತಿದ್ದಾಗ ಹಿಂದುಗಡೆಯಿಂದ 2 ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು  ಪ್ರಕಾಶ್ ಪೂಜಾರಿಯ ಸ್ಕೂಟರ್ ನ್ನು ಅಡ್ಡಗಟ್ಟಿ ಮಾರಾಣಾಂತಿಕ ಹಲ್ಲೆ ನಡೆಸಿದ್ದರು .ಈ ಬಗ್ಗೆ ಪ್ರಕಾಶ್  ಪೂಜಾರಿಯವರ ತಮ್ಮ ಕಿರಣ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊ.ನಂ: 46/2016 ಕಲಂ: 307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ ಬರೋಬ್ಬರಿ ಒಂದು ವರ್ಷಗಳ ನಂತರ ಆರೋಪಿಗಳನ್ನೂ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುತಾರೆ.ಬಂಧಿತ ಆರೋಪಿಗಳಲ್ಲಿ   ಅಬ್ದುಲ್ ನೌಫಲ್,ಅಬ್ದುಲ್ ನಾಸಿರ್,ಮೊಹಮ್ಮದ್ ಶಬೀರ್ ,ಮೊಹಮ್ಮದ್ ಶಬ್ಬೀರ್ ಮೊದಲು ಪೊಲೀಸ್ ಬಲೆಗೆ ಬಿದ್ದಿರುತ್ತಾರೆ .ಪಾಪ್ಯುಲರ್ ಫ್ರಂಟ್ ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡ  ಕೈಕಂಬ ನಿವಾಸಿ ಅಹ್ಮದ್ ಖುರೇಶಿ ಅವರನ್ನು ಕೂಡ  ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುತ್ತಾರೆ ಅದಲ್ಲದೆ ಜೋಕಟ್ಟೆ ತಾಲೂಕ್ ಪಾಪ್ಯುಲರ್ ಫ್ರಂಟ್ ಮುಖಂಡ  ಖಾದರ್ ಬಗ್ಗೆ ಕೂಡ  ಮಂಗಳೂರು ಪೊಲೀಸರು ಬಲೇ ಬಿಸಿದ್ದು ಜಿಲ್ಲೆಯ ಪಾಪ್ಯುಲರ್ ಫ್ರಂಟ್ ಮುಖಂಡರ ಅಸಮಾಧಾನ ಮುಖ್ಯ ಕಾರಣವಾಗಿದೆ . ಅಹ್ಮದ್ ಖುರೇಶಿ  ಮೇಲೆ ಪೋಲಿಸ್  ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ  ಇಂದು ಪಾಪ್ಯುಲರ್ ಫ್ರಂಟ್ ಇಂಡಿಯಾ ಸಂಘಟನೆಯವರು  ಯಾವುದೇ ಪೂರ್ವ ಅನುಮತಿ ಇಲ್ಲದೆ  ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ .ಮೂಲಗಳ ಪ್ರಕಾರ ಕೆಲವು ದಿನಗಳ ಹಿಂದೆಯೇ ರಾಷ್ಟ್ರೀಯ ತನಿಖಾ ದಳ ( NIA  ) ಮಂಗಳೂರಿಗೆ ಭೇಟಿ ನೀಡಿ  ಪಾಪ್ಯುಲರ್ ಫ್ರಂಟ್ ಇಂಡಿಯಾ ಸಂಘಟನೆಗೆ  ನಿಷೇಧಿತ ಸಿಮಿ ಸಂಘಟನೆ ಜೊತೆ  ಇರುವ ನಂಟಿನ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿತ್ತು .ಮೂಲಗಳ ಪ್ರಕಾರ ಕೆಲ ಶಂಕಿತ ವ್ಯಕ್ತಿಗಳ ವಿವರವನ್ನು ಮಂಗಳೂರು ಪೊಲೀಸರು  NIA  ಗೆ ನೀಡಿದ್ದಾರೆ ಎಂದು ಹೇಳಲಾಗಿದೆ .  ಈ ಎಲ್ಲಾ ಬೆಳವಣಿಗೆ ಇಂದ ಕಂಗೆಟ್ಟ   ಪಾಪ್ಯುಲರ್ ಫ್ರಂಟ್ ಇಂದು  ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಸಿದೆ ಎಂದು ಹೇಳಲಾಗಿದೆ .

loading...

No comments