ಅವಹೇಳನಕಾರಿ ಹೇಳಿಕೆ ರಾಖಿ ಸಾವಂತ್ ಅರೆಸ್ಟ್
ಲೂದಿಯಾನ: ಮಹಾಗ್ರಂಥ ರಾಮಾಯಣದ ಕತ್ರುೃ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ವಿವಾದಾತ್ಮಕ ತಾರೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರನ್ನು ಮುಂಬೈ ಪೊಲೀಸರು ಪಂಜಾಬ್ ಲೂದಿಯಾನದಲ್ಲಿ ಇಂದು ಬಂಧಿಸಿದ್ದಾರೆ.
ವಾಲ್ಮೀಕಿ ಸಮುದಾಯದ ಜನತೆಯ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ರಾಖಿ ವಿರುದ್ಧ ಕೇಸ್ ದಾಖಲಾಗಿ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಲೂಧಿಯಾನ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿತ್ತು ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ರಾಖಿ ವಿಚಾರಣೆಗೆ ಗೈರು ಹಾಜರು ಆಗಿದ್ದರು .ಇದೀಗ ಮುಂಬೈ ಪೊಲೀಸರು ರಾಖಿ ಸಾವಂತ್ ಅನ್ನು ಪಂಜಾಬ್ ಲೂದಿಯಾನದಲ್ಲಿ ಇಂದು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ .
loading...
No comments