ಮಂಗಳೂರು ಗಸ್ತು ಕಾಯುವ ಪೊಲೀಸರಿಗೆ ರೈಫಲ್ ಮತ್ತು ಪಿಸ್ತೂಲ್ : ಎಂ ಚಂದ್ರಶೇಖರ್
ಮಂಗಳೂರು :ಉರ್ವ ಠಾಣಾ ವ್ಯಾಪ್ತಿಯಲ್ಲಿ ಎ.ಎಸ್.ಐ ಐತಪ್ಪರವರ ಮೇಲೆ ಹಲ್ಲೆ ಮತ್ತು ನಗರದಲ್ಲಿ ಪೋಲೀಸರ ಮೇಲೆ ನಡೆಯುತ್ತಿರುವ ಹಲ್ಲೆಯ ಹಿನ್ನಲೆಯಲ್ಲಿ ರಾತ್ರಿ ಗಸ್ತು ಕಾಯುವ ಪೊಲೀಸರಿಗೆ ಆತ್ಮ ರಕ್ಷಣೆಗೆ ರೈಫಲ್ ಮತ್ತು ಪಿಸ್ತೂಲ್ ನೀಡಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ .
ಎ.ಎಸ್.ಐ ಐತಪ್ಪರವರ ಮೇಲೆ ದಾಳಿ ನಡೆದಾಗ ಅವರು ತಮ್ಮ ಆತ್ಮ ರಕ್ಷಣೆಗೆ ಯಾವುದೇ ಆಯುಧವನ್ನು ಬಳಸಿಲ್ಲ ಹೀಗಾಗಿ ಹಲ್ಲೆಕೋರರು ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆ ಅದಲ್ಲದೆ ಇನ್ನು ಮುಂದೆ ಭವಿಷ್ಯದಲ್ಲಿ ರಾತ್ರಿ ಗಸ್ತು ಕಾಯುವ ಪೋಲೀಸರ ಮೇಲೆ ನಡೆಯುವ ಹಲ್ಲೆಯನ್ನು ತಪ್ಪಿಸಲು ಒಬ್ಬ ಪೊಲೀಸ್ ಗೆ ರೈಫಲ್ ಮತ್ತು ಪಿಸ್ತೂಲ್ ನೀಡಲಾಗುವುದು ಎಂದರು
ಐತಪ್ಪರವರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಎ.ಎಸ್.ಐ ಐತಪ್ಪರವರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು .ಬಂಧಿತ ಆರೋಪಿಗಳಾದ ಶಮೀರ್ ಕಾಟಿಪಳ್ಳ ಮತ್ತು ಮೊಹಮ್ಮದ ನಿಯಾಝ್ ನಿಂದ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಲಾಗಿದೆ ಎಂದು ಹೇಳಿದರು .ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದು ಕೊಳ್ಳಲಾಗುವುದು ಎಂದು ಹೇಳಿದರು .
ಪಾಪ್ಯುಲರ್ ಫ್ರಂಟ್ ಇಂಡಿಯಾ ಆರೋಪಕ್ಕೆ ಹೇಳಿದ್ದೇನು
ಕೋಡಿಕೆರೆ ಪ್ರಕಾಶ್ ಪೂಜಾರಿ ಪ್ರಕರಣ ಸಂಬಂಧ ಅಹ್ಮದ್ ಖುರೇಶಿಯನ್ನು ಬಂಧಿಸಲಾಗಿದೆ .ಖುರೇಷಿ ಮೇಲೆ ಯಾವುದೇ ಪೊಲೀಸ್ ದೌರ್ಜನ್ಯ ನಡೆದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖ ಆಗಿಲ್ಲ ,ನ್ಯಾಯಾಲಯದಲ್ಲೂ ಈ ಬಗ್ಗೆ ಖುರೇಷಿ ಹೇಳಿಕೆ ನೀಡಿದ್ದಾನೆ ,ಪೊಲೀಸ್ ದೌರ್ಜನ್ಯದ ಬಗ್ಗೆ ಖುರೇಷಿ ಸಹೋದರ ನೀಡಿದ ದೂರಿನ ಬಗ್ಗೆ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಹೇಳಿದರು .
ಮಂಗಳೂರು ಮುಸ್ಲಿಂ ಫೇಸ್ಬುಕ್ ಪೇಜ್ ಬ್ಲಾಕ್
ಪಾಪ್ಯುಲರ್ ಫ್ರಂಟ್ ಇಂಡಿಯಾ ಮೇಲೆ ಲಾಠಿ ಚಾರ್ಜ್ ನಡೆದ ನಂತರದ ಬೆಳವಣಿಗೆಯಲ್ಲಿ ಮಂಗಳೂರು ಮುಸ್ಲಿಂ ಫೇಸ್ಬುಕ್ ಪೇಜ್ ನಿಂದ ಪತ್ರಕರ್ತರಿಗೆ ಬೆದರಿಕೆ ಮತ್ತು ಕೋಮು ಸಾಮರಸ್ಯ ಕದಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಕೇಂದ್ರ ಸಚಿವಾಲಯದ ಗಮನಕ್ಕೆ ತಂದು ಪೇಜ್ ಬ್ಲಾಕ್ ಮಾಡಿ ಅದನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು .
loading...
No comments