Breaking News

ಮಂಗಳೂರು ಪೊಲೀಸ್ ಆಯುಕ್ತರ ಎತ್ತಂಗಡಿಗೆ ನಡೆಯುತ್ತಿದೆ ಷಡ್ಯಂತ್ರ ?



ಮಂಗಳೂರು : ಕೋಮು ಸೂಕ್ಷ್ಮ ಜಿಲ್ಲೆಗಳಲ್ಲಿ ಒಂದಾದ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಹುಯಶಸ್ವಿಯಾದ ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಅವರನ್ನು ವರ್ಗಾವಣೆ ಮಾಡಲು sdpi ಪೋಷಿತ ಪಾಪ್ಯುಲರ್  ಫ್ರಂಟ್ ಇಂಡಿಯಾದ ಮುಖಂಡರು ಶತಾಯ ಗತಾಯ ಪ್ರಯತ್ನ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ .

ಇದಕ್ಕೆ ಪೂರಕವಾಗುವಂತೆ ಲಾಠಿ ಚಾರ್ಜ್ ಸಂಬಂಧಿಸಿ sdpi   ನಿಯೋಗ ತುರಾತುರಿಯಲ್ಲಿ ಉಪಚುನಾವಣೆ ನಡುವೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಮೈಸೂರಿನ ಅವರ ಮನೆಯಲ್ಲಿ ಭೇಟಿ ಮಾಡಿ ಘಟನೆ ಬಗ್ಗೆ ವಿವರಣೆ ನೀಡಿ ನ್ಯಾಯಾಂಗ ತನಿಖೆಯ ಬೇಡಿಕೆ ಇಟ್ಟಿತು .ಅದಲ್ಲದೆ ಜಿಲ್ಲೆಯ ಸಚಿವ ಯುಟಿ ಖಾದರ್ ಸ್ವತಃ ಅಹಮ್ಮದ್ ಖುರೇಷಿಯನ್ನು ಭೇಟಿ ಮಾಡಿ ಪೊಲೀಸ್ ದೌಜನ್ಯ ನಡೆದ ಬಗ್ಗೆ ಗ್ರಹ ಸಚಿವರಿಂದ ತನಿಖಾಧಿಕಾರಿ ನೇಮಿಸುವ ಬಗ್ಗೆ ಹೇಳಿದ್ದರು .

 ಕರ್ನಾಟಕ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿರುವಾಗ ಸರ್ಕಾರಿ ಆಧಿಕಾರಿಗಳ ವರ್ಗಾವಣೆ ಮಾಡಲು ಕಾಂಗ್ರೆಸ್ ತಯಾರಿ ನಡೆಸುತ್ತಿದೆ .ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ತನ್ನ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಮಂಗಳೂರು ಕಾಂಗ್ರೆಸ್ ಮತ್ತು sdpi ಮುಖಂಡರು ಮಂಗಳೂರು ಪೊಲೀಸ್ ಆಯುಕ್ತರ ವರ್ಗಾವಣೆಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ .

sdpi  ಮುಖಂಡರ ಅಸಮಾಧಾನಕ್ಕೆ ಕಾರಣ ವೇನು ಗೊತ್ತೇ 
ಕೋಡಿಕೆರೆ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಪೂಜಾರಿ ಹತ್ಯೆಗೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಇಂಡಿಯಾ ವಲಯದಲ್ಲಿ  ಸಕ್ರಿಯವಾಗಿ ಗುರುತಿಸಿಕೊಂಡ  ಅಹಮ್ಮದ್ ಖುರೇಷಿಯನ್ನು  ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು ಇದೇ ಪ್ರಕರಣಕ್ಕೆ ಸಂಬಂಧಿಸಿ ಜೋಕಟ್ಟೆ   ಪಾಪ್ಯುಲರ್ ಫ್ರಂಟ್ ಇಂಡಿಯಾ ಮುಖಂಡ ಖಾದರ್ ಬಂಧನಕ್ಕೆ ಕೂಡ ಬಲೇ ಬಿಸಿದ್ದರು .ಖಾದರ್ ಹೆಸರನ್ನು ಪ್ರಕರಣದಲ್ಲಿ ಕೈಬಿಡಬೇಕು ಎಂದು ಪಾಪ್ಯುಲರ್ ಫ್ರಂಟ್ ಇಂಡಿಯಾ ಮುಖಂಡರು ರಾಜಕೀಯ ಬಲಪ್ರಯೋಗಿಸಿ ಮಂಗಳೂರು ಸಿಸಿ ಬಿ ಪೋಲೀಸರ ಮೇಲೆ ಒತ್ತಡ ತಂದಿದ್ದರು ,ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದ ಮಂಗಳೂರು ಪೋಲೀಸರ ನಡೆಯ ವಿರುದ್ಧ PFI  ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿತ್ತು .ಮುತ್ತಿಗೆ ಸಂದರ್ಭದಲ್ಲಿ ಪೊಲೀಸರು ಬಿಸಿದ ಲಾಠಿ ಜಿಲ್ಲೆಯ sdpi  ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

loading...

No comments