ಮಾವಿನ ಕಾಯಿ- ಹಣ್ಣು ಬಗ್ಗೆ ನೀವು ತಿಳಿದು ಕೊಳ್ಳಬೇಕಾದ ವಿಷಯ
ಮಾವಿನ ಕಾಯಿ- ಹಣ್ಣು ಸಿಗುವಕಾಲ ಬೇಸಿಗೆ. ಮಾವಿನಕಾಯಿ ಉಪ್ಪಿನಕಾಯಿಗೆ ಮಾತ್ರವಲ್ಲ ಅನೇಕ ಬಗೆಯ ಅಡುಗೆಗಳಿಗೂ ಮಾವಿನಕಾಯಿ ಬಳಸುತ್ತಾರೆ, ಬಗೆಬಗೆ ಮಾವಿನ ಖಾದ್ಯಗಳನ್ನು ಮಾಡುತ್ತಾರೆ.
ಆದರೆ ಹಸಿ-ಹಣ್ಣು ಎರಡನ್ನು ತಿನ್ನುವವರ ಪ್ರಮಾಣ ಹೆಚ್ಚು . ಗರ್ಭಿಣಿ ಮಹಿಳೆಯು ದಿನಕ್ಕೊಂದು ಮಾವಿನ ಹಣ್ಣು ತಿನ್ನುವುದು ಎಲ್ಲಾ ರೀತಿಯ ಒಳಿತು, ಇದು ಆಕೆಗೆ ಅಗತ್ಯವಾದ ಮೆಗ್ನೀಷಿಯಂ ಹಾಗೂ ಕ್ಯಾಲ್ಸಿಯಂ ನೀಡುತ್ತದೆ. ಅಷ್ಟೆ ಅಲ್ಲದೆ ಆಕೆಯನ್ನು ಒತ್ತಡದಿಂಡ ಮುಕ್ತ ಗೊಳಿಸುತ್ತದೆ. ಸ್ನಾಯುಗಳ ನೋವು ಉಂಟಾಗದಂತೆ ಮಾಡುತ್ತದೆ.ಒಂದು ಮಟ್ಟದಲ್ಲಿ ಗರ್ಭಪಾತವನ್ನು ತಡೆಗಟ್ಟುತ್ತದೆ. ನಿಯಮಿತವಾಗಿ ಸೇವಿಸಿದರೆ ಮಲಬದ್ಧತೆ ದೂರಮಾಡುತ್ತದೆ.ಇದು ಬಿಡುವ ಋತುವಿನಲ್ಲಿ ಪ್ರತಿದಿನ ತಿಂದರೆ ಚರ್ಮದ ಅಂದ ಕಾಪಾಡುತ್ತದೆ. ಹಲ್ಲಿನ ದುರ್ವಾಸನೆಯನ್ನು ದೂರಮಾಡುತ್ತದೆ ಎಂದು ಆಯುರ್ವೇದದಲ್ಲಿ ತಿಳಿಸಿದೆ.ಯಾವುದೇ ಸಂಗತಿ ಆಗಿರಲಿ ಅತಿಯಾದರೆ ತೊಂದರೆ ತಪ್ಪಿದ್ದಲ್ಲ. ಅಂತಹ ಅನಾಹುತ ಇದರಿಂದಲೂ ಆಗುತ್ತದೆ.ಅಲೆಗ್ಜಾ೦ಡರ್ ಕಾಲದಲ್ಲಿ ಆತ ಅರ್ಧದಲ್ಲಿ ದಂಡಯಾತ್ರೆ ಬಿಟ್ಟು ತನ್ನ ದೇಶಕ್ಕೆ ಹೋಗಲು ಕಾರಣ ಈ ಮಾವಿನಕಾಯಿ. ಅತಿಯಾಗಿ ಸೈನಿಕರು ಇದನ್ನು ಸೇವಿಸಿದ ಪರಿಣಾಮ ಆಮಶಂಕೆ ಶುರುವಾಗಿ ಸಾಕಷ್ಟು ಜನರ ಜೀವಹಾನಿ ಆಯಿತಂತೆ. ಹೆಚ್ಚು ಸೇವನೆಯಿಂದ ಮಲಬದ್ಧತೆ, ಕಣ್ಣುರಿ, ಹಸಿವೆ ಆಗದೆ ಇರುವ ಸಮಸ್ಯೆ ಉಂಟುಮಾಡುತ್ತದೆ ಈ ಮಾವು
loading...
No comments