50 ನಕ್ಸಲರನ್ನು ಗುಂಡಿಟ್ಟು ಕೊಲ್ಲುತ್ತೇನೆ :ಸಿ.ಆರ್.ಪಿ.ಎಫ್. ಯೋಧ ಮಹೇಂದ್ರ ಕುಮಾರ್
ರಾಯಪುರ: ಸುಕ್ಮಾ ನರಮೇಧಕ್ಕೆ ಪ್ರತಿಯಾಗಿ 50 ನಕ್ಸಲರನ್ನು ಕೊಲ್ಲುವುದಾಗಿ ನಕ್ಸಲರ ದಾಳಿಯಲ್ಲಿ ಬದುಕುಳಿದಿರುವ ಸಿ.ಆರ್.ಪಿ.ಎಫ್. ಯೋಧ ಮಹೇಂದ್ರ ಕುಮಾರ್ ಹೇಳಿದ್ದಾರೆ.
ನಕ್ಸಲರ ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧ ಮಹೇಂದ್ರ ಕುಮಾರ್ ನಕ್ಸಲರು 25 ಮಂದಿ ಯೋಧರನ್ನು ಕೊಂದಿದ್ದಾರೆ, ಇದಕ್ಕೂ ಪ್ರತಿಯಾಗಿ 50 ನಕ್ಸಲರನ್ನು ಕೊಲ್ಲುತ್ತೇನೆ, ಆರೋಗ್ಯ ಸರಿಹೋದ ನಂತರ ಸುಕ್ಮಾಗೆ ತೆರಳಿ ಅಲ್ಲಿಯೇ ಕೆಲಸ ಮಾಡುತ್ತೇನೆ, ನಕ್ಸಲರನ್ನು ಬಲಿ ಪಡೆಯುತ್ತೇನೆ ಎಂದಿದ್ದಾರೆ .
ದಿನಾಂಕ ೨೪-೦೪-೨೦೧೭ ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮೇಲೆ ಅತ್ಯಂತ ಘೋರ ಹೊಂಚು ದಾಳಿ ನಡೆಸಿದ ನಕ್ಸಲರು 25 ಯೋಧರ ಹತ್ಯೆ ನಡೆಸಿದ್ದರು . ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದರು .
loading...
No comments