ಕಲ್ಲು ಗುಂಡು ತೂರಿದರೆ ಮಾತುಕತೆ ಅಸಾಧ್ಯ: ಮೆಹಬೂಬಾ ಮುಫ್ತಿ
ನವದೆಹಲಿ : ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿದರು.
ಕಾಶ್ಮೀರ ಕಣಿವೆಯಲ್ಲಿ ಕಲ್ಲು ತೂರಾಟದ ಘಟನೆಗಳನ್ನು ಹತ್ತಿಕ್ಕಲು ರಾಜ್ಯ ಸರಕಾರ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರ ಸರಕಾರ ಕೂಡ ರಾಜ್ಯದ ಸಮಗ್ರ ಅಭಿವೃದ್ಧಿಗೆ ಗಂಭೀರ ಚಿಂತನೆ ನಡೆಸಿದೆ ಎಂದು ಸಿಎಂ ಮುಫ್ತಿ ತಿಳಿಸಿದರು.
'ಮೊದಲು ನಾವು ಸ್ಥಳೀಯ ಪರಿಸ್ಥಿತಿಯನ್ನು ಸುಧಾರಿಸಬೇಕು. ಯಾಕೆಂದರೆ ಕಲ್ಲು ತೂರಾಟ ಮತ್ತು ಗುಂಡು ಹಾರಾಟ ನಡುವೆ ಮಾತುಕತೆ ಸಾಧ್ಯವಿಲ್ಲ. ಇನ್ನು ಎರಡು-ಮೂರು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಬಳಿಕವಷ್ಟೇ ಮಾತುಕತೆ ಪ್ರಕ್ರಿಯೆ ಆರಂಭವಾಗಬಹುದು' ಎಂದು ಮೆಹಬೂಬಾ ನುಡಿದರು.
loading...

No comments