ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ ಆರೋಪ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಬಂಧನ
ಕೊಪ್ಪಳ: ಪ್ರೀತಿಯ ನಾಟಕವಾಡಿ ನಿರಂತರವಾಗಿ ಅತ್ಯಾಚಾರವೆಸಗಿ ಮದುವೆಗೆ ನಿರಾಕರಿಸಿದ ಆರೋಪದ ಮೇಲೆ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಬಂಧನವಾಗಿರೋ ಘಟನೆ ಕೊಪ್ಪಳ ದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿಯನ್ನು ಬಂಧಿಸಲಾಗಿದೆ. 5 ವರ್ಷಗಳಿಂದ ಪ್ರೀತಿಯ ಹೆಸರಿನಲ್ಲಿ ನಿರಂತರವಾಗಿ ಅತ್ಯಾಚಾರ ಮಾಡಿದ್ದ ಬಸವರಾಜ, ಯುವತಿ ಮದುವೆಯಾಗುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿ ಧಮ್ಕಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಏಪ್ರಿಲ್ 22ರಂದು ಪ್ರಿಯಕರ ಬಸವರಾಜ ಹಳ್ಳಿ ವಿರುದ್ಧ ಯುವತಿ ಬೇವೂರು ಠಾಣೆಯಲ್ಲಿ ಅತ್ಯಾಚಾರ, ಜಾತಿನಿಂದನೆ ಪ್ರಕರಣ ದಾಖಲು ಮಾಡಿದ್ರು. ಯುವತಿಯ ದೂರಿನ ಅನ್ವಯ ಆರೋಪಿಯನ್ನ ಬೇವೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
loading...
No comments