ಜನ ಸಂಪರ್ಕ ಸಭೆಯಲ್ಲಿ ಗುಂಡಾ ವರ್ತನೆ ತೋರಿದ ಅಭಯಚಂದ್ರ ಜೈನ್ !
ಮಂಗಳೂರು : ಮುಲ್ಕಿ ಮೂಡಬಿದರೆ ಶಾಸಕ ಅಭಯಚಂದ್ರ ಜೈನ್ ಬಜ್ಪೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಸಭ್ಯವಾಗಿ ವರ್ತಿಸಿ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಿನ್ನೆ ನಡೆದಿದೆ .
ಘಟನೆ ವಿವರ
ದಿನಾಂಕ ೧೭-೦೪-೨೦೧೬ ಬಜಪೆ ಸಂತ ಜೋಸೆಫರ ಸಭಾಂಗಣದಲ್ಲಿ ಶಾಸಕ ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಹಕ್ಕು ಪತ್ರ ವಿತರಣೆ ಸಂಧರ್ಭ ಗದ್ದಲ ಏರ್ಪಟ್ಟಿದೆ .ಕೆಂಜಾರು ನಾರಾಯಣ ಗುರು ನಗರದ ೫೨ ಕುಟುಂಬಗಳಿಗೆ ಹಕ್ಕು ಪತ್ರ ನೀಡದಿರುವ ಬಗ್ಗೆ ಪ್ರಶ್ನಿಸಿ ಬಜಪೆ ಪಂಚಾಯತ್ ಸದಸ್ಯ ಲೋಕೇಶ್ ಪೂಜಾರಿ ಮತ್ತು ಇನ್ನಿತರರು ಅಭಯಚಂದ್ರ ಜೈನ್ ಅವರ ಬಳಿ ಚರ್ಚೆ ನಡೆಸಿದಾಗ ಶಾಸಕ ಅಭಯಚಂದ್ರ ಜೈನ್ ರೊಚ್ಚಿಗೆದ್ದು ಅಸಭ್ಯವಾಗಿ ವರ್ತಿಸಿದ್ದಾರೆ .ಈ ಎಲ್ಲಾ ಘಟನೆಯನ್ನು ಚಿತ್ರೀಕರಿಸುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಶಾಸಕರು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ .ಶಾಸಕರ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ
loading...
No comments