Breaking News

"PFI ಮೇಲೆ ಲಾಠಿ" ಖಂಡಿಸಿ ನಡೆದ ಸಭೆಯಲ್ಲಿ ರಮಾನಾಥ್ ರೈ ಅವರಿಗೆ ದಿಕ್ಕಾರ ಕೂಗಿದರು ?


ಮಂಗಳೂರು : ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪಾಪ್ಯುಲರ್ ಫ್ರಂಟ್ ಇಂಡಿಯಾ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿ ಪ್ರಹಾರವನ್ನು ಖಂಡಿಸಿ PFI ಮುಖಂಡರು ಮತ್ತು ಕಾಂಗ್ರೆಸ್ಸಿನ ಮುಸ್ಲಿಂ ಮುಖಂಡರು ನಗರದಲ್ಲಿ ಸಭೆ ನಡೆಸಿದರು .
ಪ್ರಕಾಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಅಹಮ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ,ಮಂಗಳೂರು ಸಿಸಿಬಿ ಪೊಲೀಸರು ವಿರುದ್ಧ ತನಿಖೆಯಾಗಬೇಕು ,ಮತ್ತು ಲಾಠಿ ಚಾರ್ಜ್ ಗೆ ಕಾರಣರಾದ ಮಂಗಳೂರು ಕಮಿಷನರ್ ಅವರ ವರ್ಗಾವಣೆ ಮಾಡಬೇಕು ಮತ್ತು ಇನ್ನಿತರ ಬೇಡಿಕೆಗಳ ಬಗ್ಗೆ  ಈ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ತಿಳಿದು ಬಂದಿದೆ .
ಸಭೆಯ ನಡುವೆ ವ್ಯಕ್ತಿಯೊಬ್ಬ ಉಸ್ತುವಾರಿ  ಸಚಿವ ರಮಾನಾಥ್ ರೈ ಅವರಿಗೆ ದಿಕ್ಕಾರ ಕೂಗಿದ ಘಟನೆ ನಡೆಯಿತು .ಈ ಬಗ್ಗೆ  ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತ ಪಡಿಸಿ ಸಭೆಯಲ್ಲಿ ಸ್ವಲ್ಪ ಸಮಯದ ವರೆಗೆ ಗೊಂದಲ ಏರ್ಪಟ್ಟಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ


loading...

No comments