ಕಾವಿ ಧರಿಸಿ ರಾಮಾಯಣ ಪಠಿಸುವ ಮುಸ್ಲಿಂ ಜೋಗಿಗಳು
ಗೊರಖ್‌ಪುರ್: ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಮುಸ್ಲಿಮರ ಒಂದು ಪಂಗಡವೇ ರಾಮಾಯಣ, ಕಬೀರನ ದ್ವಿಪದಿಗಳನ್ನು ಹಾಡಿಕೊಂಡು ಸುತ್ತಾಡುತ್ತಿದ್ದ ಮುಸ್ಲಿಂ ಜೋಗಿಗಳು ಕಾಣ ಸಿಗುತ್ತಾರೆ
ಸೂಫಿ ಪಂಗಡದಲ್ಲಿ ಹಿಂದೂ ಧರ್ಮ ಹಾಗೂ ಇಸ್ಲಾಂ ಧರ್ಮದ ಲಕ್ಷಣಗಳು ಕಾಣಿಸುತ್ತದೆ. ಸೂಫಿ ಪಂಗಡದ ಒಂದು ಭಾಗವಾಗಿರುವ ಮುಸ್ಲಿಂ ಜೋಗಿಗಳ ಸಂತತಿ ಇದೀಗ ಎರಡೂ ಧರ್ಮದ ಕಲಹದ ಪರಿಣಾಮವೋ ಅಥವಾ ಇನ್ನಾವುದೋ ಕಾರಣದಿಂದ ಕ್ಷೀಣಿಸತೊಡಗಿದೆ. ಉತ್ತರ ಪ್ರದೇಶದ ಗೋರಖ್‌ಪುರ, ದೇವರಿಯ, ಕುಶಿನಗರ, ಸಂತ ಕಬೀರ, ಬಲ್ ರಾಮ್ ಪುರ್ ಮತ್ತು ಅಜಂಘರ್‌ನಲ್ಲಿ ಹೆಚ್ಚು ಕಾಣಸಿಗುವ ಈ ಪಂಗಡದ ಜನರಲ್ಲಿ ಕೆಲವೇ ವ್ಯಕ್ತಿಗಳು ತಮ್ಮ ಹಳೆಯ ಸಂಪ್ರದಾಯವನ್ನು ಅಭ್ಯಸಿಸುತ್ತಾರೆ.
'ನನ್ನ ಗಂಡ ಅಲಿ ರಾಜ್, ಜೋಗಿ ಪಂಗಡಕ್ಕೆ ಸೇರಿದವರಾಗಿದ್ದಾರೆ, ನಾವು ಹಲವಾರು ವರ್ಷಗಳಿಂದ ನಮ್ಮ ಪದ್ದತಿಯನ್ನು ಪಾಲಿಕೊಂಡು ಬಂದಿದ್ದೇವೆ. ಬಾಬಾ ಗೋರಖ್‌ನಾಥ್‌ರನ್ನು ನಾವು ಪ್ರತಿನಿತ್ಯ ಪೂಜಿಸುತ್ತೇವೆ. ಅಲ್ಲದೇ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತೇವೆ. ನಮಗೆ ಹಿಂದೂ ಹಾಗೂ ಇಸ್ಲಾಂನಲ್ಲಿ ಯಾವುದೇ ಬೇದಬಾವವಿಲ್ಲ. ಏಕೆಂದರೆ ಮುಂದೊಂದು ದಿನ ಎಲ್ಲರೂ ಸಾಯುತ್ತೇವೆ ನಮಗೆಲ್ಲರಿಗೂ ಒಬ್ಬನೇ ದೇವರು' ಎನ್ನುತ್ತಾರೆ ಅದೇ ಪ್ರದೇಶದ ನಿವಾಸಿ ಮುನ್ನಿ.
ಮುಸ್ಲಿಂ ಜೋಗಿಗಳ ಕುರಿತು ಮಾತನಾಡಿದ ಮುನ್ನಿ, ಜೋಗಿ ಪಂಗಡದ ಜನರ ಮೇಲೆ ಒಳಗಿನ ಹಾಗೂ ಹೊರಗಿನ ಜನರಿಂದ ನಿರಂತರ ಶೋಷಣೆ ನಡೆಸುತ್ತಿದೆ ಎನ್ನುತ್ತಾರೆ. 'ಮುಸ್ಲಿಮರು ನಮ್ಮನ್ನು ಮುಸ್ಲಿಂ ಎಂದು ಒಪ್ಪಿಕೊಳ್ಳುವುದಿಲ್ಲ, ಅಲ್ಲದೇ ರಾಮಾಯಣ ಹಾಗೂ ಹಿಂದೂ ಧರ್ಮದ ಆಚರಣೆ ನಿಲ್ಲಿಸುವಂತೆ ಹೇಳುತ್ತಾರೆ. ಇನ್ನೊಂದೆಡೆ ಹಿಂದುಗಳು ಇಸ್ಲಾಂ ಆಚರಣೆ ನಿಲ್ಲಿಸುವಂತೆ ಒತ್ತಡ ಹೇರುತ್ತಾರೆ. ಹೀಗಾಗಿ ನಾವು ಪ್ರತಿನಿತ್ಯ ಭಯದಿಂದಲೇ ವಾಸ ಮಾಡುವಂತಾಗಿದೆ. ನಾವು ಸಂಸ್ಕೃತಿಯನ್ನು ನಡೆಸಿಕೊಂಡು ಬಂದಂತೆ ನಮ್ಮ ಮಕ್ಕಳು ನಡೆಸುತ್ತಾರೆ ಎಂಬ ನಂಬಿಕೆ ಇಲ್ಲ' ಎಂದು ಹೇಳಿದರು.
-vijayakarantaka
loading...
No comments