Breaking News

ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರು ರಾಷ್ಟ್ರದ ಹೋರಾಟಗಾರರು: ಫಾರೂಕ್‌ ಅಬ್ದುಲ್ಲಾ



ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಸುವವರು ರಾಷ್ಟ್ರಕ್ಕಾಗಿ ಹೋರಾಟ ಮಾಡುವವರು ಎಂದು ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ಬುಧವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಧರ್ಮದ ಆಧಾರದ ಮೇಲೆ ನಮ್ಮನ್ನು ವಿಭಜನೆ ಮಾಡುವವರ ವಿರುದ್ಧದ ಹೋರಾಟ ನಮ್ಮದು’ ಎಂದಿದ್ದಾರೆ.

‘ಮೋದಿಯವರಿಗೆ ಒಂದು ವಿಷಯ ಹೇಳಬಯಸುತ್ತೇನೆ. ಪ್ರವಾಸೋದ್ಯಮ ನಮ್ಮ ಬದುಕು. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕಲ್ಲು ತೂರಾಟ ನಡೆಸುವ ವ್ಯಕ್ತಿ ಪ್ರವಾಸೋದ್ಯಮದೊಂದಿಗೆ ಮಾಡುವಂಥದ್ದು ಏನೂ ಇಲ್ಲ. ಕಲ್ಲು ತೂರುವವರು ರಾಷ್ಟ್ರಕ್ಕಾಗಿ ಹೋರಾಡುತ್ತಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಫಾರೂಕ್‌ ಹೇಳಿದ್ದಾರೆ.

‘ಭಾರತ ಮತ್ತು ಪಾಕಿಸ್ತಾನ ತಮ್ಮ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳದಿದ್ದರೆ ಅಮೆರಿಕ ಮುಂದೆ ಬಂದು ಈ ಸಮಸ್ಯೆ ಬಗೆಹರಿಸಬೇಕು’ ಎಂದು ಅವರು ತಿಳಿಸಿದ್ದಾರೆ.
loading...

No comments