Breaking News

ಪೊಲೀಸ್ ದೌರ್ಜನ್ಯ ಆರೋಪ ಸಿಎಂ ಭೇಟಿ ಮಾಡಿದ SDPI


ಮೈಸೂರು : ಪಾಪ್ಯುಲರ್ ಫ್ರಂಟ್ ಇಂಡಿಯಾ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಶುಕ್ರವಾರ ಬೆಳಿಗ್ಗೆ SDPI ಮುಖಂಡರು ವಿವಿಧ ಬೇಡಿಕೆಯನ್ನು ಮುಂದಿಟ್ಟು ಸಿಎಂ ಸಿದ್ದರಾಮಯರವರನ್ನು ಮೈಸೂರಿನಲ್ಲಿ ಭೇಟಿ ಮಾಡಿದರು .




SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹನೀಪ್ ಖಾನ್ ಕೊಡಾಜೆ, ರಾಜ್ಯ ಕಾರ್ಯದರ್ಶಿ ಅಪ್ಸರ್ ರವರ  ನೇತೃತ್ವದಲ್ಲಿ ಭೇಟಿಯಾದ ನಿಯೋಗ  ಸುಮಾರು 45 ನಿಮಿಷ ಗಳ ಕಾಲ ಸುದೀರ್ಘ ಚರ್ಚೆ ನಡೆಸಿತು .
ಕೊಲೆ ಪ್ರಕರಣವೊಂದರಲ್ಲಿ ಅಮಾಯಕ  ಅಹಮ್ಮದ್ ಖುರೇಷಿಯನ್ನು ಬಂಧಿಸಿ ಪೊಲೀಸ್ ದೌರ್ಜನ್ಯ ಎಸಗಲಾಗಿದೆ,ಈ ಬಗ್ಗೆ ಪ್ರತಿಭಟನೆ ಮಾಡಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ ಪಾಪ್ಯುಲರ್ ಫ್ರಂಟ್ ಇಂಡಿಯಾ ಕಾರ್ಯಕರ್ತರ ಮೇಲೆ   ದೌರ್ಜನ್ಯ ನಡೆಸಿದ್ದಾರೆ . ಪ್ರತಿಭಟನೆ ವೇಳೆ ನಡೆದ ಲಾಠಿ ಪ್ರಹಾರದ  ವಿವರ ಗಳನ್ನು ಸಿದ್ದರಾಮಯ್ಯನವರಿಗೆ  ಸಲ್ಲಿಸಿ ಮಂಗಳೂರು ಸಿಸಿಬಿ ಪೋಲೀಸರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕಾಗಿ ಬೇಡಿಕೆ ಇಟ್ಟರು ಎಂದು ತಿಳಿದು ಬಂದಿದೆ .

 ಮನವಿಯನ್ನು ಆಲಿಸಿದ ಮುಖ್ಯ ಮಂತ್ರಿಗಳು ಶೀಘ್ರ ಹಾಗೂ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.


loading...

No comments