ಪ್ರವೀಣ್ ಪೂಜಾರಿ ಕೊಲೆ ಆರೋಪಿಗಳಿಗೆ ಜಾಮೀನು
ಉಡುಪಿ : ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಿಗೆ ರಾಜ್ಯ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಂತೆಕಟ್ಟೆ ಕಳ್ತೂರಿನ ಶ್ರೀಕಾಂತ್ ಕುಲಾಲ್ (20) ಹಾಗೂ ಮೂರನೇ ಆರೋಪಿ ಶಿವಪುರ ಗ್ರಾಮ ಕೆರೆಟ್ಟಿನ ಸುದೀಪ್ ಕುಲಾಲ್ (24) ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
2016ರ ಆಗಸ್ಟ್ 17ರಂದು ಪ್ರವೀಣ್ ಪೂಜಾರಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದಾನೆ ಎಂದು ಆರೋಪಿಸಿ ದುಷ್ಕರ್ಮಿಗಳ ತಂಡವೊಂದು ಅಮಾನುಷವಾಗಿ ಹೊಡೆದು ಹತ್ಯೆ ಮಾಡಿ ಪರಾರಿಯಾಗಿತ್ತು. ಈ ಪ್ರಕರಣದ 22 ಮಂದಿ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ಆರೋಪಿಗಳನ್ನು ನ್ಯಾಯಾಲಯವು ಈಗಾಗಲೇ ಬಂಧಮುಕ್ತಗೊಳಿಸಿದೆ.
loading...
No comments