ಸುರೇಶ್‌ಗೌಡ , ಶಿವರಾಮೇಗೌಡ ಜೆಡಿಎಸ್ಗೆ
ಬೆಂಗಳೂರು: ನಾಗಮಂಗಲದ ಕಾಂಗ್ರೆಸ್‌ನ ಮಾಜಿ ಶಾಸಕ ಸುರೇಶ್‌ಗೌಡ ಮತ್ತು ಮಾಜಿ ಸಚಿವ ಶಿವರಾಮೇಗೌಡ ಅವರು ಜೆಡಿಎಸ್ ಸೇರ್ಪಡೆ ಕುರಿತು ಪಕ್ಷದ ರಾಜ್ಯಾಧ್ಯಕ್ಷರು ತೀರ್ಮಾನಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಇಬ್ಬರು ನಾಯಕರು ತಮ್ಮನ್ನು ಭೇಟಿ ಮಾಡಿ ಜೆಡಿಎಸ್ ಸೇರ್ಪಡೆಗೊಳ್ಳುವ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ವರಿಷ್ಠರೂ ಆಗಿರುವ ದೇವೇಗೌಡರು ಹೇಳಿದ್ದಾರೆ.
ಅವರು ಮೊದಲು ಜೆಡಿಎಸ್‌ಗೆ ಸೇರ್ಪಡೆಯಾಗಲಿ, ಆ ನಂತರ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ವಿಚಾರವನ್ನು ನಂತರ ತೀರ್ಮಾನಿಸುವುದಾಗಿ ದೇವೇಗೌಡ ಅವರು ಹೇಳಿದ್ದಾರೆ.
ಸುರೇಶ್‌ಗೌಡ ಮತ್ತು ಶಿವರಾಮೇಗೌಡ ಅವರು ಇಂದು ಬೆಳಿಗ್ಗೆ ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
loading...
No comments