ಕನ್ನಡ ಚಿತ್ರಗಳಿಗೆ ಎಸಿ ಹಾಕಲ್ಲ ಎಂದ ಎಲಿಮೆಂಟ್ಸ್ ಮಾಲ್ ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು (video)
ಬೆಂಗಳೂರು : ನಾಗಾವರ ರಸ್ತೆಯ ಎಲಿವೆಂಟ್ ಮಾಲ್‍ನಲ್ಲಿರುವ ಚಿತ್ರಮಂದಿರದಲ್ಲಿ ಕನ್ನಡದ ರಾಜಕುಮಾರ ಚಿತ್ರಕ್ಕೆ ಅವಮಾನ ಮಾಡಲಾಗಿದೆ. ಚಿತ್ರದ ಪ್ರೇಕ್ಷಕರನ್ನು ಅರ್ಧದಲ್ಲಿಯೇ ವಾಪಸ್ ಕಳುಹಿಸಿ ಮಾಲ್‍ನವರು ದರ್ಪ ಮರೆದಿದ್ದಾರೆ. ಎಲಿವೆಂಟ್ ಮಾಲ್‍ನಲ್ಲಿ ಪುನೀತ್ ಅಭಿನಯದ ರಾಜಕುಮಾರ ಕನ್ನಡ ಚಿತ್ರ ನೋಡಲು ಟಿಕೆಟ್ ತೆಗೆದುಕೊಂಡು ಹೋಗಿದ್ದ ಪ್ರೇಕ್ಷಕರಿಗೆ ಭಾರೀ ನಿರಾಸೆ ಕಾದಿತ್ತು. ಚಿತ್ರಪ್ರದರ್ಶನ ಪ್ರಾರಂಭಗೊಂಡು ಅರ್ಧಗಂಟೆ ನಂತರ ಸೆಕೆ ಪ್ರಾರಂಭವಾಗಿದೆ. ಪ್ರೇಕ್ಷಕರು ಏಸಿ ಆನ್ ಮಾಡಲು ಕೇಳಿಕೊಂಡಿದ್ದಾರೆ. ಚಿತ್ರಮಂದಿರದ ಮಾಲೀಕರು ಕನ್ನಡ ಚಿತ್ರಗಳಿಗೆ ಏಸಿ ಹಾಕುವುದಿಲ್ಲ. ಬೇಕಾದರೆ ನೋಡಿ ಇಲ್ಲದಿದ್ದರೆ ಹೋಗಿ ಎಂದು ದೌಲತ್ತು ತೋರಿದ್ದಾರೆ. ಏಸಿ ಇಲ್ಲದ ಕನ್ನಡ ಚಿತ್ರದ ಪ್ರೇಕ್ಷಕರು ಮಹಿಳೆಯರು, ಮಕ್ಕಳೊಂದಿಗೆ ಚಿತ್ರಮಂದಿರದಿಂದ ಹೊರಬಂದು ಪ್ರತಿಭಟಿಸಿದ್ದಾರೆ.
loading...
No comments