ಭಾರತಕ್ಕೆ ವಾಪಸಾದ ಉಜ್ಮಾ
ನವದೆಹಲಿ : ಪಾಕಿಸ್ತಾನದ ತಾಹೀರ್ ಅಲಿ ಅವರು ಬಲವಂತದಿಂದ ತನ್ನನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿ, ಅಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದ ನವದೆಹಲಿಯ ಮಹಿಳೆ ಉಜ್ಮಾ ಗುರುವಾರ ತವರಿಗೆ ಮರಳಿದ್ದಾರೆ.
ಉಜ್ಮಾ ಅವರು ಭಾರತಕ್ಕೆ ಮರಳಲು ಇಸ್ಲಾಮಾಬಾದ್ ಹೈಕೋರ್ಟ್ ಅನುಮತಿ ನೀಡಿದ್ದು, ಇಂದು ಬೆಳಿಗ್ಗೆ ಪೊಲೀಸ್ ಭದ್ರತೆಯೊಂದಿಗೆ ಅಮೃತಸರ ಸಮೀಪದ ವಾಘಾ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಿದರು.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಉಜ್ಮಾ ಅವರನ್ನು ಸ್ವಾಗತಿಸಿದ್ದು, ‘ಭಾರತದ ಮಗಳು’ ಎಂದು ಹೇಳಿದ್ದಾರೆ.
‘ನಿಮಗಾಗಿರುವ ತೊಂದರೆಗೆ ಬಗ್ಗೆ ನನಗೆ ಬೇಸರವಿದ್ದು, ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಸುಷ್ಮ ಅವರು ಟ್ವೀಟ್ ಮಾಡಿದ್ದಾರೆ
-ani
No comments