Breaking News

ದಾವೂದ್ ಸೊಸೆ ವಿವಾಹದಲ್ಲಿ ಕಾಣಿಸಿಕೊಂಡ ಬಿಜೆಪಿ ಸಂಸದರು !



ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೊಸೆಯ ವಿವಾಹದಲ್ಲಿ ಮಹಾರಾಷ್ಟ್ರದ ಶಿಕ್ಷಣ ಸಚಿವ ಗಿರೀಶ್ ಮಹಾಜನ್, ಹತ್ತು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಹಲವು ಶಾಸಕರು ಪಾಲ್ಗೊಂಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಸಹಾಯಕ ಪೊಲೀಸ್ ಕಮಿಷನರ್ ಸೇರಿ ಒಂಬತ್ತು ಮಂದಿ ಇನ್‌ಸ್ಪೆಕ್ಟರ್‌ಗಳು ಸೇರಿ ಬಿಜೆಪಿ ಶಾಸಕರಾದ ದೇವಯಾನಿ ಫರಾಂಡೆ, ಬಾಳಾ ಸಾಹೇಬ್ ಸನಾಪ್ ಹಾಗೂ ಸೀಮಾ ಹಿರ್ಲೆ, ನಾಸಿಕ್ ಮೇಯರ್ ರಂಜನಾ ಭನಾಸಿ, ಉಪಮೇಯರ್ ಪ್ರಥಮೇಶ್ ಗೀತಾ, ಹಲವು ಮಂದಿ ಮೇ 19ರಂದು ನಾಸಿಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಇದೀಗ ಮುಂಬಯಿ ಮುಖ್ಯಮಂತ್ರಿ ಮದುವೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಾಶಿಕ್ ಪೊಲೀಸ್ ಕಮಿಷನರ್ ರವೀಂದ್ರ ಸಿಂಘಾಲ್‌ಗೆ ಆದೇಶಿಸಿದ್ದಾರೆ.

No comments