Breaking News

ಪ್ರಧಾನಿಗೆ ಪತ್ರ ಬರೆಯುವುದು ಪುಕ್ಸಟ್ಟೆ ಪ್ರಚಾರಕ್ಕೆ : ರಮಾನಾಥ್ ರೈಬಂಟ್ವಾಳ : ಪ್ರಧಾನ ಮಂತ್ರಿಗೆ ಪತ್ರ ಬರೆದು ಊರಿನ  ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸುತ್ತಿರುವುದು  ಕೇವಲ  ಪುಕ್ಕಟೆ ಪ್ರಚಾರಕ್ಕಾಗಿ ಹಾಗೆ ಮಾಡುತ್ತಿದ್ದಾರೆಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

“ಇಂತಹ ಪತ್ರಗಳಿಂದ ಯಾವುದೇ ರಸ್ತೆ ಅಭಿವೃದ್ಧಿ ಸಾಧ್ಯವಿಲ್ಲ. ನೇರವಾಗಿ ಪ್ರಧಾನಿಗೆ ಪತ್ರ ಬರೆದು ಕೆಲಸ ಆಗುವುದಿದ್ದರೆ ದೇಶದಲ್ಲಿ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ವಿಧಾನಸಭೆಯೂ ಅಗತ್ಯವಿರಲಿಲ್ಲ” ಎಂದವರು ಪ್ರಧಾನಿಗೆ ಪತ್ರ ಬರೆಯುವ ಪ್ರವೃತ್ತಿ ವಿರುದ್ಧ ಟೀಕಾಸ್ತ್ರವೆಸಗಿದ್ದಾರೆ.  “ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಬಹುತೇಕ ರಸ್ತೆ ಕಾಮಗಾರಿ ಸಹಿತ ನೂರಾರು ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದೆ. ಆದರೆ ಕೆಲವೊಂದು ರಾಜಕೀಯ ಪ್ರೇರಿತ ವ್ಯಕ್ತಿಗಳು ಪ್ರಧಾನಿಗೆ ಪತ್ರ ಬರೆದಿರುವುದರಿಂದಾಗಿಯೇ ಇವೆಲ್ಲ ನಡೆಯುತ್ತಿದೆ ಎಂದು ಭ್ರಮಿಸಿದ್ದಾರೆ”  ಎಂದು ರೈ ತೀಕ್ಷ್ಣವಾಗಿ ಪ್ರತಿಕ್ರಯಿಸಿದ್ದಾರೆ.

No comments