Breaking News

ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ಸಲ್ಲದು:ನಿತೀನ್‌ ಗಡ್ಕರಿ


ನವದೆಹಲಿ : ಬಿಜೆಪಿ ಮತ್ತು ಸಂಘ ಪರಿವಾರ ಗೋಹತ್ಯೆ ನಿಷೇಧವನ್ನು ಬೆಂಬಲಿಸುತ್ತದೆ ಆದರೆ ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರವನ್ನು ಖಂಡಿಸುತ್ತದೆ ಎಂದು ಕೇಂದ್ರ ಸಚಿವ ನಿತೀನ್‌ ಗಡ್ಕರಿ ಹೇಳಿಕೆ ನೀಡಿದ್ದು, ಗೋರಕ್ಷರು ನಮ್ಮವರಲ್ಲ ಎಂದಿದ್ದಾರೆ.

 ಅಭಿವೃದ್ಧಿ ಮೋದಿ ಸರಕಾರದ ಮೂಲ ಗುರಿ, ಇಂತಹ ಪ್ರಕರಣಗಳು ಕೋಮು ಸೌಹಾರ್ಧತೆಗೆ ಧಕ್ಕೆ ತರುತ್ತಿದ್ದು, ಸರಕಾರದ ಗುರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು. ಸರಕಾರ ''ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌'' ತತ್ವವನ್ನು ಪಾಲಿಸುತ್ತಿದೆ. ಸರಕಾರದ ಯಾವುದೇ ಯೋಜನೆಗಳಲ್ಲೂ ಅಲ್ಪಸಂಖ್ಯಾತರಿಗೆ ತಾರತಮ್ಯ ಎಸಗಿಲ್ಲ ಎಂದರು.

No comments