ಹಾಳುಮೂಳು ಆಹಾರಗಳ ಕೆಟ್ಟ ಪರಿಣಾಮಗಳು
ಜಂಕ್ ಫುಡ್ ಅಥವಾ ಹಾಳುಮೂಳು ಆಹಾರಗಳ ಸೇವನೆಯಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ಹಾಳುಮೂಳು ಅಥವಾ ಕಳಪೆ ಆಹಾರಗಳು ಪೋಷಕಾಂಶ ರಹಿತವಾಗಿದ್ದು, ಇಂತಹ ಆಹಾರಗಳ ಸೇವನೆಯಿಂದಾಗಿ ವ್ಯಕ್ತಿಯಲ್ಲಿ ಅತಿ ಆಹಾರ ಸೇವನೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಯಾಕೆಂದರೆ,
ಈ ಹಾಳುಮೂಳು ಆಹಾರಗಳಲ್ಲಿ ನಾರಿನ ಅಂಶವು ಬಹಳ ಕಡಿಮೆ ಇರುತ್ತದೆ.
ಹಾಳುಮೂಳು ಆಹಾರಗಳು ಬಹಳ ಸ್ವಾದಿಷ್ಟವಾಗಿರುತ್ತವೆ.
ಇವುಗಳ ಸ್ವಲ್ಪವೇ ಪ್ರಮಾಣವು ಅತ್ಯಧಿಕ ಕ್ಯಾಲರಿಯನ್ನು ಒದಗಿಸುತ್ತದೆ.
ಈ ಆಹಾರಗಳಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ.
ಸಕ್ಕರೆಯು ಅಧಿಕ ಪ್ರಮಾಣದಲ್ಲಿರುತ್ತದೆ.
ಅಧಿಕ ಹಾಳು ಮೂಳು ಆಹಾರಗಳ ಸೇವನೆಯ ಹತ್ತು ಕೆಟ್ಟ ಪರಿಣಾಮಗಳು
1. ಲಕ್ವಾದ ಅಪಾಯ:
ಹೃದಯ ಸಾಕಷ್ಟು ಆರೋಗ್ಯಕರವಾಗಿ ಇರಬೇಕೆಂದರೆ, ಅಧಿಕ ಪ್ರಮಾಣದಲ್ಲಿ ಸೋಡಿಯಂನ್ನು ಸೇವಿಸದೆ, ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ಸೋಡಿಯಂನ್ನು ಸೇವಿಸಿ. ನಮ್ಮ ದೇಹದ ದ್ರವಾಂಶದ ಸಂತುಲನೆಯ ನಿರ್ವಹಣೆಗೆ ಸೋಡಿಯಂ ಆವಶ್ಯಕ. ಆದರೆ, ಹಾಳು ಮೂಳು ಆಹಾರ ಸೇವನೆಯಿಂದ ನಮ್ಮ ದೇಹಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಸೋಡಿಯಂ ಸೇರುತ್ತದೆ, ಅಧಿಕ ಸೋಡಿಯಂಯುಕ್ತ ಆಹಾರಗಳೆಂದರೆ - ಬಟಾಟೆ ಚಿಪ್ಸ್, ಫ್ರೆಂಚ್ ಫ್ರೆ„, ಪಿಝಾ... ಇತ್ಯಾದಿಗಳು. ಈ ಆಹಾರಗಳು ನಮ್ಮ ಲಕ್ವಾ ಮತ್ತು ರಕ್ತದ ಒತ್ತಡದ ಅಪಾಯವನ್ನು ಹೆಚ್ಚಿಸುತ್ತವೆ.
2. ದೇಹದ ತೂಕ ಹೆಚ್ಚಾಗುವುದು:
ನಿಮ್ಮ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇರದಿದ್ದರೆ, ನಿಮ್ಮ ದೇಹದ ತೂಕವು ಹೆಚ್ಚಾಗಬಹುದು. ಉದಾಹರಣೆಗೆ 500 ಗ್ರಾಂ ಹಾಳು ಮೂಳು ಆಹಾರವನ್ನು ಪ್ರತಿ ದಿನ ಸೇವಿಸುತ್ತಾ ಹೋದರೆ, ಕೇವಲ ಒಂದೇ ವಾರದೊಳಗೆ ನಿಮ್ಮ ತೂಕವು 2 ಕೆ.ಜಿ.ಯಷ್ಟು ಹೆಚ್ಚಾಗಬಹುದು. ಇಡಿ ಹಣ್ಣು, ಮೊಳಕೆ ಕಾಳುಗಳು, ಸಲಾಡ್‌ಗಳ ಜೊತೆಗೆ ಕುರುಕಲು ತಿಂಡಿಗಳನ್ನು ಸೇವಿಸುವುದು ಯಾವಾಗಲೂ ಪೋಷಣಾಭರಿತವಾದುದು. ಈ ಕುರುಕಲು ತಿಂಡಿಗಳು ಹಾಳು ಮೂಳು ಆಹಾರಗಳಿಗಿಂತ ಸ್ವಲ್ಪ ಕಡಿಮೆ ಕ್ಯಾಲರಿಗಳನ್ನು ಒದಗಿಸಬಹುದು, ಹಾಗಾಗಿ ನಿಮ್ಮ ತೂಕ ಗಳಿಕೆಯ ಪ್ರಮಾಣವೂ ಸಹ ಕಡಿಮೆ ಇರುತ್ತದೆ.
3. ಹಲ್ಲು ಸವೆಯುವುದು:
ಹೆಚ್ಚು ಸಿಹಿಯುಕ್ತ ಅಥವಾ ಸಕ್ಕರೆ ಸೇರಿಸಿದ ಆಹಾರಗಳನ್ನು ಸೇವಿಸುವುದರಿಂದ ಹಲ್ಲುಗಳು ಹುಳುಕಾಗಬಹುದು. ಅತ್ಯಧಿಕ ಸಿಹಿ ಸೇರಿಸಿದ ಹಾಳು ಮೂಳು ಆಹಾರಗಳನ್ನು ಸೇವಿಸುವುದರಿಂದ, ಅಂದರೆ ಲಘು ಪಾನೀಯ, ಕ್ಯಾಂಡಿ, ಕೇಕ್‌ಗಳು ಮತ್ತು ಚಾಕೋಲೆಟ್‌ಗಳು ನಿಮ್ಮ ಹಲ್ಲು, ಒಸಡುಗಳು ಮತ್ತು ಬಾಯಿಯನ್ನು ಸಿಹಿ ಆವರಿಸುತ್ತದೆ. ಈ ಸಿಹಿ ಅಥವಾ ಸಕ್ಕರೆಯ ಲೇಪನವು ಹಲ್ಲಿನ ಎನಾಮಲ್ ಮೇಲೆ ಪರಿಣಾಮವನ್ನುಂಟು ಮಾಡಿ, ಹಲ್ಲುಗಳು ಸವೆಯಲು ಅಥವಾ ಹಲ್ಲು ಹುಳುಕಾಗಲು ಕಾರಣವಾಗುತ್ತದೆ.
4. ಜಠರ-ಕರುಳಿನ ಕಾಯಿಲೆಗಳು:
ಹಾಳು ಮೂಳು ಆಹಾರಗಳ ಅಧಿಕ ಸೇವನೆಯಿಂದ ಜಠರ-ಕರುಳಿನ ಸಮಸ್ಯೆ ಉಂಟಾ ಗಬಹುದು. ಸಂಸ್ಕರಿಸಿದ ಹಾಳು ಮೂಳು ಆಹಾರದಲ್ಲಿ ಇರುವುದು ಬರಿ ಅತ್ಯಲ್ಪ$ ಪ್ರಮಾ ಣದ ನಾರಿನಂಶ. ಮಲವಿಸರ್ಜನೆಯು ಚೆನ್ನಾಗಿ ಆಗಲು, ಆಹಾರದಲ್ಲಿ ನಾರಿನಂಶ ಇರಬೇಕು. ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಸೇವಿಸದಿದ್ದರೆ, ನೀವು ಮಲಬದ್ಧತೆಯಿಂದ ಬಳಲಬಹುದು. ಈ ಹಾಳು ಮೂಳು ಆಹಾರದಲ್ಲಿರುವ ಕೃತಕ ಕೊಬ್ಬು, ಕೆಲವು ವ್ಯಕ್ತಿಗಳಲ್ಲಿ ಅತಿಸಾರ ಆಥವಾ ಹೊಟ್ಟೆನೋವನ್ನು ಉಂಟು ಮಾಡಬಹುದು. ಉತ್ತಮ ಆರೋಗ್ಯ ಕ್ಕಾಗಿ ಹಣ್ಣು, ತರಕಾರಿ, ಮೊಳಕೆ ಕಾಳುಗಳಂತಹ ಉತ್ತಮ ಆಹಾರಗಳನ್ನು ಸೇವಿಸಿ.
5. ಶಕ್ತಿಯ ಕೊರತೆ:
ಹಾಳು ಮೂಳು ಆಹಾರದಲ್ಲಿ ಮನುಷ್ಯ ಶರೀರಕ್ಕೆ ಆವಶ್ಯಕವಾಗಿ ಬೇಕಿರುವ ಯಾವುದೇ ಪೋಷಕಾಂಶಗಳು ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಈ ಆಹಾರಗಳಲ್ಲಿ ತುಂಬಿರುವುದು ಹಾನಿಕಾರಕ ಕಾಬೋìಹೈಡ್ರೇಟ್‌ಗಳು, ಕೊಬ್ಬು ಮತ್ತು ಕೊಲೆಸ್ಟ್ರಾಲ್. ಇವುಗಳಿಂದ ದೇಹಕ್ಕೆ ಯಾವುದೇ ರೀತಿಯ ಉಪಯುಕ್ತ ಶಕ್ತಿ ದೊರಕುವುದಿಲ್ಲ. ಹೀಗಾಗಿ, ಹಾಳು ಮೂಳು ಆಹಾರವನ್ನು ಸೇವಿಸುತ್ತಾ ಇರುವ ಕೆಲವರ ಶರೀರಕ್ಕೆ ಸಾಕಷ್ಟು ಅವಶ್ಯಕ ಪೋಷಕಾಂಶಗಳು ದೊರೆಯದೆ, ಅವರ ಶರೀರದ ಶಕ್ತಿಯ ಮಟ್ಟವು ಕುಸಿಯುತ್ತದೆ, ಮತ್ತು ಅವರಿಗೆ ನಿಶ್ಶಕ್ತಿಯು ಬಾಧಿಸುತ್ತದೆ.
6. ಏಕಾಗ್ರತೆಯ ಕೊರತೆ:
ಹಾಳು ಮೂಳು ಆಹಾರ ಸೇವನೆಯ ಹಾನಿಕಾರಕ ಅಂಶಗಳು ಎಂದರೆ, ಈ ಆಹಾರಗಳಲ್ಲಿರುವ ಅಧಿಕ ಪ್ರಮಾಣದ ಎಣ್ಣೆ ಮತ್ತು ಕೊಬ್ಬಿನ ಅಂಶಗಳು. ಇದರ ಪರಿಣಾಮವಾಗಿ, ಆಹಾರ ಜೀರ್ಣವಾಗಲು ಕಷ್ಟವಾಗುತ್ತದೆ ಮತ್ತು ಈ ಕಾರ್ಯಕ್ಕಾಗಿ ಅಧಿಕ ಪ್ರಮಾಣದ ರಕ್ತ ಮತ್ತು ಕಿಣ್ವಗಳು ವ್ಯಯವಾಗುತ್ತವೆ. ಒಂದುವೇಳೆ ಒಬ್ಬ ವ್ಯಕ್ತಿ ಅಧಿಕ ಪ್ರಮಾಣದಲ್ಲಿ ಹಾಳು ಮೂಳು ಆಹಾರವನ್ನು ಸೇವಿಸುತ್ತಿದ್ದಾನೆ ಎಂದಾದರೆ, ಆತನ ದೇಹದ ಅಧಿಕ ಪ್ರಮಾಣದ ರಕ್ತ ಕರುಳಿಗೆ ಹರಿಯುತ್ತಿರುತ್ತದೆ. ಈ ಕಾರಣದಿಂದ ವ್ಯಕ್ತಿಗೆ ಮಂಪರಾಗುವಂತೆ ಅನ್ನಿಸುತ್ತದೆ, ಮತ್ತು ಆತ ಏಕಾಗ್ರತೆಯ ಕೊರತೆಯಿಂದ ಬಳಲುತ್ತಿರುತ್ತಾನೆ.
7. ಹೃದಯದ ಕಾಯಿಲೆಗಳು:
ಮಯೋಕಾರ್ಡಿಯಲ್ ಇನ್ ಫಾಕ್ಷìನ್, ಕಾರ್ಡಿಯಾಕ್ ಅರೆಸ್ಟ್ ಮತ್ತು ಅಥೆರೋಸ್ಕಿ$Éರೋಸಿಸ್ ಸೇರಿದಂತೆ ಬಹಳಷ್ಟು ಹೃದಯದ ಕಾಯಿಲೆಗಳಿಗೆ ಪ್ರಧಾನ ಕಾರಣವಾಗಿರುವುದು ಹಾಳು ಮೂಳು ಆಹಾರ ಸೇವನೆ. ಇದಕ್ಕೆ ಕಾರಣವೇನೆಂದರೆ, ಹಾಳು ಮೂಳು ಆಹಾರಗಳಲ್ಲಿರುವ ಅಧಿಕ ಪ್ರಮಾಣದ ಕೆಟ್ಟ ಕೊಲೆಸ್ಟ್ರಾಲ್. ಇದು ರಕ್ತನಾಳದ ಗೋಡೆಯ ಒಳ ಪದರದಲ್ಲಿ ಸಂಗ್ರಹವಾಗುತ್ತದೆ, ಮತ್ತು ಈ ರಕ್ತನಾಳಗಳ ಮೂಲಕ ರಕ್ತ ಪರಿಚಲನೆಗಾಗಿ ಹೃದಯವು ಹೆಚ್ಚುವರಿ ಪ್ರಯತ್ನ ಪಡಬೇಕಾಗುವುದು. ರಕ್ತದಲ್ಲಿ ಕೊಬ್ಬಿನಂಶವು ಹೆಚ್ಚಿದ್ದರೆ, ಆಮ್ಲಜನಕದ ಮಟ್ಟವು ಕುಸಿಯುತ್ತದೆ.
8. ಪಿತ್ತಜನಕಾಂಗ ವೈಫಲ್ಯ:
ಹಾಳು ಮೂಳು ಆಹಾರಗಳಲ್ಲಿರುವ ಕೊಬ್ಬು, ಕೊಲೆಸ್ಟ್ರಾಲ್, ಉಪ್ಪು$ ಮತ್ತು ಹೆಚ್ಚುವರಿ ಸಂರಕ್ಷಕ ಅಂಶಗಳಿಂದಾಗಿ ಪಿತ್ತಜನಕಾಂಗಕ್ಕೆ ಹಾನಿಯಾಗುತ್ತದೆ.
9. ಮಧುಮೇಹ:
ಹಾಳುಮೂಳು ಆಹಾರಗಳು ಪ್ಯಾಂಕ್ರಿಯ ಅಥವಾ ಮೇದೋಜೀರಕ ಗ್ರಂಥಿಯ ಮೇಲೂ ಹಾನಿ ಉಂಟುಮಾಡುತ್ತವೆ. ಇದರ ಪರಿಣಾಮವಾಗಿ, ಇನ್ಸುಲಿನ್-ಆಧಾರಿತ ಡಯಾಬೆಟೆಸ್ ಮೆಲ್ಲಿಟಸ್ ಉಂಟಾಗಬಹುದು.
10. ಭಾವನೆಗಳ ಮೇಲೆ ಪರಿಣಾಮ:
ದಿಢೀರ್ ಆಹಾರ ಮತ್ತು ಹಾಳು ಮೂಳು ಆಹಾರದಲ್ಲಿ ಟ್ರಾನ್ಸ್ ಕೊಬ್ಬು ಮತ್ತು ಮೊನೊಸೋಡಿಯಂ ಗುÉಟಮೇಟ್‌ಗಳು ಇರುತ್ತವೆ. ಇವು ಖನ್ನತೆಯನ್ನು ಹೆಚ್ಚಿಸುತ್ತವೆ, ಭಾವನೆಯಲ್ಲಿ ಏರು ಪೇರಾಗುತ್ತದೆ ಮತ್ತು ರಾತ್ರಿಯಲ್ಲಿ ನಿದ್ದೆ ಬರಲು ಕಷ್ಟವಾಗುತ್ತದೆ. ಹಾಗಾಗಿ, ಹಾಳು ಮೂಳು ತಿನ್ನುವವರ ಸಾಮರ್ಥ್ಯದ ಮಟ್ಟವು ಯಾವತ್ತೂ ಸ್ಥಿರವಾಗಿರುವುದಿಲ್ಲ.
ಆರೋಗ್ಯಕ್ಕಾಗಿ ಸಲಹೆಗಳು
ದಿಡೀರ್ ಆಹಾರ ಅಥವಾ ಹಾಳು ಮೂಳು ಆಹಾರಗಳನ್ನು ನಿಮ್ಮ ಆಹಾರ ಕ್ರಮದಿಂದ ಸಂಪೂರ್ಣವಾಗಿ ಬಿಟ್ಟು ಬಿಟ್ಟರೆ ಒಳ್ಳೆಯದು, ಆದರೆ ಒತ್ತಾಯವೇನಿಲ್ಲ. ನೀವು ಅಪರೂಪಕ್ಕೆ ಯಾವತ್ತಾದರೂ ಬರ್ಗರ್, ಪಿಝಾ, ಲಘು ಪಾನೀಯ ಮತ್ತು ಕರಿದ ಆಹಾರಗಳನ್ನು ಚಪ್ಪರಿಸುವವರಾದರೆ, ಅಷ್ಟೇನೂ ತೀವ್ರವಾಗಿ ಕಾಳಜಿ ಪಡಬೇಕಾಗಿಲ್ಲ. ಈ ಆಹಾರಗಳನ್ನು ನಿತ್ಯವೂ ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಡಿ. ಯಾವಾಗಲೂ ಪೋಷಣಾಭರಿತ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಸಮೃದ್ಧವಾಗಿ ಸೇವಿಸಿ.
ನಿತ್ಯವೂ ಯಥೇತ್ಛ ನೀರನ್ನು ಕುಡಿಯಿರಿ.
ನಿಯುತ ವ್ಯಾಯಾಮವನ್ನು ತಪ್ಪಿಸಬೇಡಿ.
ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ.
No comments