ತಡ ರಾತ್ರಿ ಅಂಗಡಿ ಮಾಲಕನ ಕೊಲೆ ಯತ್ನ
ಮಂಗಳೂರು: ಅಂಗಡಿ ಮಾಲಕನಿಗೆ ಐದು ಮಂದಿಯ ತಂಡ ಒಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನಲ್ಲಿ ವರ್ದಿ ಆಗಿದೆ . ಪಾವೂರು ನಿವಾಸಿ ಅಬ್ದುಲ್ ರಹಿಮಾನ್(೩೫) ಕೊಲೆಯತ್ನಕ್ಕೆ ಒಳಗಾದವರು.
ಇವರು ಪಾವೂರು ಕಡವಿನ ಬಳಿ ಜ್ಯೂಸ್ ಅಂಗಡಿ ಹೊಂದಿದ್ದರು. ಇವರು ನಿನ್ನೆ ತಡರಾತ್ರಿ ಜ್ಯೂಸ್ ಅಂಗಡಿಯನ್ನು ಮುಚ್ಚಲು ಅನುವಾಗುತ್ತಿದ್ದ ಸಂದರ್ಭದಲ್ಲಿ ಓಮ್ನಿ ವಾಹನದಲ್ಲಿ ಬಂದ ಐದು ಮಂದಿಯ ತಂಡ ಚೂರಿಯಿಂದ ತಲೆ, ಕಾಲು ಹಾಗೂ ಕೈಗಳ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ. ಇವರು ಸ್ಥಳೀಯವಾಗಿ ಗಾಂಜಾ ವ್ಯಸನಿಗಳ ಉಪಟಳದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರೆಂಬ ಕಾರಣಕ್ಕಾಗಿ ತಂಡ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದೆ. ಗಾಯಾಳುವನ್ನು ನಾಟೆಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
No comments