ಸಿದ್ದರಾಮಯ್ಯ ನಾಲಾಯಕ್ ಮುಖ್ಯಮಂತ್ರಿ :ಮೂಲ ಕಾಂಗ್ರೆಸ್ಸಿಗ ಎಚ್ .ಆರ್.ಶ್ರೀನಾಥ್
ನೂರಾರು ಮೂಲ ಕಾಂಗ್ರೆಸಿಗರು ಸಿದ್ದರಾಮಯ್ಯ ಅವರ ವಿರುದ್ದ ಘೋಷಣೆ ಕೂಗಿದರು. ಚುನಾವಣೆ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿಯಾಗಿರುವ ಡಾ.ಶೈಲಜಾನಾಥ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮೂಲ ಕಾಂಗ್ರೆಸ್ಸಿಗರು ದೂರು ನೀಡಿದರು.
ಮಾಜಿ ಎಂಎಲ್ಸಿ ಎಚ್ .ಆರ್.ಶ್ರೀನಾಥ್ ಮಾತನಾಡಿ, ಸಿದ್ದರಾಮಯ್ಯ ನಾಲಾಯಕ್ ಮುಖ್ಯಮಂತ್ರಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋದರೆ ಮೂಲ ಕಾಂಗ್ರೆಸ್ಸಿಗರು ಚುನಾವಣೆ ಬಹಿಷ್ಕರಿಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಮೂಲ ಕಾಂಗ್ರೆಸ್ಸಿಗರು ಹೋರಾಟ ಆರಂಭಿಸಲಿದ್ದಾರೆ. ಕೂಡಲೇ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು. ದಲಿತರು ಅಥವಾ ಅದೇ ಸಮುದಾಯದ ಎಚ್.ವಿಶ್ವನಾಥ ಸೇರಿ ಯಾರನ್ನಾದರೂ ಸಿಎಂ ಮಾಡಲಿ. ಇಲ್ಲವಾದರೆ ರಾಜ್ಯದಲ್ಲಿ ಕಾಂಗ್ರೆಸ್ ನೆಲಸಮವಾಗಲಿದೆ ಎಂದು ಹೇಳಿದರು.
Vk
No comments