Breaking News

ನವ ದಂಪತಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ


ಶಿರಸಿ:  ಬಾಪೂಜಿ ನಗರದ ಶ್ಯಾಮಸುಂದರ ಕಾನಡೆ ಅವರ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.


ಕಾನಡೆಯವರ ಪುತ್ರಿ ನೇಹಾ ವಿವಾಹವು ಅಂಕೋಲಾದ ಸತೀಶ್ ಜೊತೆ ಮೇ 8ರಂದು ಶಿರಸಿಯಲ್ಲಿ ನಡೆದಿದೆ. ಮದುವೆಯ ಆಮಂತ್ರಣ ಪತ್ರವನ್ನು ಅವರು ಪ್ರಧಾನಿಗೆ ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರಧಾನ ಮಂತ್ರಿ ಕಚೇರಿ ಮೋದಿ ಸಹಿ ಇರುವ ಶುಭಾಶಯ ಪತ್ರ ಕಳುಹಿಸಿದೆ.

-prajavani 

No comments