ಭಾರಿ ಮಳೆಗೆ ಜೆಸಿಬಿ ಯೊಂದಿಗೆ ಕೊಚ್ಚಿ ಹೋದ ಕಾರ್ಮಿಕ
ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಿನ್ನೆ ಸಂಜೆ ಮತ್ತು ಕಳೆದ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಮೂವರು ಬಲಿಯಾಗಿ, ನೂರಾರು ಮರಗಳು ಧರೆಗುರುಳಿದ್ದರಿಂದ ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯವಸ್ತವಾಗಿತ್ತು. ವರುಣನ ಆರ್ಭಟಕ್ಕೆ ಕಾರ್ಮಿಕನೊಬ್ಬ ಬೆಂಗಳೂರಿನಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಇದುವರೆಗೂ ಶವ ಪತ್ತೆಯಾಗಿಲ್ಲ. ರಾತ್ರಿಯಿಡೀ ವರುಣನ ಆರ್ಭಟಕ್ಕೆ ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕಚ್ಚಿದ ಪರಿಣಾಮ ಭಾಗಶಃ ಬೆಂಗಳೂರಿನಲ್ಲಿ ಕತ್ತಲೆಯ ಕಾರ್ಮೋಡ ಕವಿದಿತ್ತು. ನಂದಿನಿ ಬಡಾವಣೆಯಲ್ಲಿ ಮಳೆ ನೀರುಗಾಲುವೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಬಸವರಾಜ್ ಅವರ ಸಂಬಂಧಿ ಶಾಂತಕುಮಾರ್ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ.
ಶನಿವಾರ ಸುರಿದ ಮಳೆಯಂತೆ ಭಾನುವಾರ ಮತ್ತು ಸೋಮವಾರವೂ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.ಹವಾಮಾನ ಇಲಾಖೆ ಮಳೆಯಾಗುವ ಬಗ್ಗೆ ಮಾಹಿತಿ ನೀಡಿದ್ದು, ಭಾರೀ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
No comments