ಕಾಶ್ಮೀರಿ ಯುವಕರಿಗೆ ಕಲ್ಲು ತೂರಾಟ ನಡೆಸಲು ಪ್ರತಿಯೊಬ್ಬರಿಗೆ Rs 500 ನೀಡಲಾಗಿತ್ತು : ನಿರ್ಮಲ್ ಸಿಂಗ್
ಶ್ರೀನಗರ : ಕಾಶ್ಮೀರ ಕಣಿವೆಯಲ್ಲಿ ದೇಶ ದ್ರೋಹಿ ಚಟುವಟಿಕೆ ನಡೆಸಲು ಪಾಕಿಸ್ತಾನ ಮೂಲದಿಂದ ಹಣ ಪಡೆದ ಆರೋಪ ಎದುರಿಸುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ. ಕಾಶ್ಮೀರಿ ಯುವಕರಿಗೆ ಸೇನೆಯ ಮೇಲೆ ಕಲ್ಲು ತೂರಾಟ ನಡೆಸಲು ಪ್ರತಿಯೊಬ್ಬರಿಗೆ Rs 500 ನೀಡಲಾಗಿತ್ತು ಎಂದು ಜಮ್ಮು ಕಾಶ್ಮೀರ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಹೇಳಿದ್ದಾರೆ .
ರಾಷ್ಟ್ರೀಯ ವಾಹಿನಿಯೊಂದಿಗೆ ಮಾತನಾಡಿದ ಅವರು ಪಾಕಿಸ್ತಾನ ಭಾರತದ ವಿರುದ್ಧ ನೇರವಾಗಿ ಯುದ್ಧ ಮಾಡಲು ಬಂದು ಸತತವಾಗಿ ನಾಲ್ಕು ಬಾರಿ ವಿಫಲವಾದ ಕಾರಣ ಇಂದು ಪಾಕಿಸ್ತಾನ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಾಲ ,ನಕಲಿ ನೋಟುಗಳ ಮೂಲಕ ಭಾರತದಲ್ಲಿ ಕಾರ್ಯಾಚರಿಸುತಿದೆ.ಈ ಎಲ್ಲಾ ಚಟುವಟಿಕೆಗಳಿಗೆ ಬೆನ್ನುಲುಬು ಆಗಿ ಕಾಶ್ಮೀರಿ ನಾಯಕರೆಂದು ಹೇಳಿಕೊಳ್ಳುವ ರಾಜಕೀಯ ನಾಯಕರುಗಳು ಕಾಶ್ಮೀರಿ ಯುವಕರಿಗೆ ಕಲ್ಲು ತೂರಾಟ ನಡೆಸಲು ಪ್ರತಿಯೊಬ್ಬರಿಗೆ Rs 500 ನೀಡಿದ್ದಾರೆ ಎಂದು ಹೇಳಿದರು .ಮತ್ತು ಕಣಿವೆಯಲ್ಲಿ ನಡೆಯುವ ಚಟುವಟಿಕೆಯ ಬಗ್ಗೆ ಸರ್ಕಾರ ಹದ್ದಿನ ಕಣ್ಣು ಇಟ್ಟಿದೆ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು .
-ani news
No comments