Breaking News

ಪಕ್ಷದಲ್ಲಿ ಅನಗತ್ಯ ಹಸ್ತಕ್ಷೇಪ ಶೋಭಾ ವಿರುದ್ಧ ಭಿನ್ನರ ಆರೋಪ


ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ನಾಯಕರಲ್ಲಿ ಉಂಟಾಗಿರುವ ಅಸಮಾಧಾನ ಅತೃಪ್ತಿಗೆ ಇತಿಶ್ರೀ ಹಾಡಲು ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಮುರುಳೀಧರರಾವ್ ಅವರು ಅತೃಪ್ತ ಮುಖಂಡರೊಡನೆ ಸಮಾಲೋಚನೆ ನಡೆಸಿದ್ದರು .ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಸೊಗಡು ಶಿವಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಭಾನುಪ್ರಕಾಶ್, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನ ಮರದ, ಮುಖಂಡರಾದ ನಂದೀಶ್, ವಿಮಲ್‌ಕುಮಾರ್ ಸುರಾನ, ಶಿವಯೋಗಿಸ್ವಾಮಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮುಖಂಡರು ಈ ಸಮಾಲೋಚನೆಯಲ್ಲಿ ಹಾಜರಿದ್ದರು .
ಈ ಮುಖಂಡರುಗಳು ಪರೋಕ್ಷವಾಗಿ ಸಂಸದೆ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಕರಂದ್ಲಾಜೆ ವಿರುದ್ದ ನೇರವಾಗಿಯೇ ದೂರು ನೀಡಿದರು.ಪಕ್ಷದ ಅಧ್ಯಕ್ಷರಾದ ಯಡಿಯೂರಪ್ಪನವರ ಬಗ್ಗೆ ನಮ್ಮದೇನು ತಕರಾರಿಲ್ಲ. ಅವರೇ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಿಂದೆ ಕೆಜೆಪಿಗೆ ಬಾರದೆ ಕೈಕೊಟ್ಟ ಕೆಲ ನಾಯಕರ ವಿರುದ್ದ ಸಂಸದೆ ಶೋಭಾಕರಂದ್ಲಾಜೆ ಅವರು ಸೇಡಿನ ಮನೋಭಾವ ತೋರುತ್ತಿದ್ದಾರೆ. ಅಲ್ಲದೆ ಪಕ್ಷದಲ್ಲಿ ಅನಗತ್ಯ ಹಸ್ತಕ್ಷೇಪ  ಮಾಡುತ್ತಿದ್ದಾರೆ ಇದನ್ನು ಸರಿಪಡಿಸಿ ಎಂದು ಮನವಿ ಮಾಡಿದರು ಎನ್ನಲಾಗಿದೆ.

loading...

No comments