Breaking News

ಭಜರಂಗಿಗಳ ಕಾರ್ಯಾಚರಣೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಭಿನ್ನ ಕೋಮ ಜೋಡಿ



ಉಡುಪಿ : ಭಿನ್ನಕೋಮಿನ ಜೋಡಿಯೊಂದು ಮಣಿಪಾಲ ಸಮೀಪದ ಪೆರಂಪಳ್ಳಿ ಸೇತುವೆಯಡಿಯಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ವೇಳೆ ಕಾಪು ಭಜರಂಗದಳ ಕಾರ್ಯಕರ್ತರು ನಡೆಸಿದ ಕಾರ್ಯಚರಣೆಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಮಣಿಪಾಲ ಪೊಲೀಸರ ಅತಿಥಿಯಾಗಿದ್ದಾರೆ.

ಯುವಕ ಪಣಿಯೂರು ನಿವಾಸಿ, ಉಚ್ಚಿಲ ಕೋಳಿಯಂಗಡಿಯಲ್ಲಿ ಕೆಲಸಕ್ಕಿದ್ದ ರಿಯಾಝ್, ಯುವತಿ

ಕಾಪುವಿನ ಮೊಬೈಲ್ ನೆಟ್ವರ್ಕ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಈತನ ಪರಿಚಯವಾಗಿ ಬಾರೀ ಸಲುಗೆಯೊಂದಿದ್ದ ಇವರು ದ್ವಿಚಕ್ರ ವಾಹನದಲ್ಲಿ ಮನೆ ಮಂದಿಯ ಕಣ್ಣುತಪ್ಪಿಸಿ ಸುತ್ತಾಡುತ್ತಿದ್ದರು. ಈ ವಿಚಾರ ತಿಳಿದ ಹಿಂದೂ ಸಂಘಟನೆಯ ಸದಸ್ಯರು ಕಾರ್ಯಚರಣೆಗಿಳಿದು ಸೋಮವಾರ ಅಂಗಡಿಗೆ ಹೋಗದ ಯುವತಿ ಮುಸ್ಲಿಂ ಯುವಕನ ಬೈಕ್ ಏರಿ ಹೊರಟಿರುವುದನ್ನು ಗಮನಿಸಿ ಬೆನ್ನು ಹಿಡಿದು ಹೊರಟರು. ಮಣಿಪಾಲ ಸಮೀಪದ ಪೆರಂಪಳ್ಳಿ ಸೇತುವೆಯಡಿಗೆ ತೆರಳಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಸಂದರ್ಭ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಘಟನೆಯ ಸದಸ್ಯರ ಸಹಕಾರದಿಂದ ಆ ಜೋಡಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
 ಮಣಿಪಾಲ ಠಾಣೆಗೆ ಆಗಮಿಸಿದ ಈ ಜೋಡಿಗಳ ಮನೆಮಂದಿಯ ಮುಂಭಾಗದಲ್ಲೇ ಆ ಯುವಕನ ಪರವಾಗಿ ವಕಾಲತ್ತು ನಡೆಸಿದ ಯುವತಿಯ ಧೈರ್ಯ ಕಂಡು ಪೊಲೀಸರು ಅರೆಕ್ಷಣ ತಬ್ಬಿಬಾಗಿದ್ದು, ಮುಚ್ಚಳಿಕೆ ಬರೆಸಿದ ಬಳಿಕ ಎಚ್ಚರಿಕೆ ನೀಡಿ ಮನೆ ಮಂದಿಯೊಂದಿಗೆ ಅವರನ್ನು ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.
Kale 

No comments