Breaking News

ಪಾಕಿಸ್ತಾನದ ಸೇನಾ ಚೌಕಿ ಧ್ವಂಸಗೊಳಿಸಿದ ಭಾರತೀಯ ಸೇನೆ


ಜಮ್ಮು ಕಾಶ್ಮೀರದ ನೌಶೇರಾ ಸೆಕ್ಟರ್‍ನಲ್ಲಿರುವ ಪಾಕಿಸ್ತಾನದ ಸೇನಾ ಚೌಕಿಗಳನ್ನು ಧ್ವಂಸ ಮಾಡುವ ಮೂಲಕ ಭಾರತೀಯ ಸೇನೆ ಪಾಕ್‌ಗೆ ತಕ್ಕ ಉತ್ತರ ನೀಡಿದೆ.
ಪಾಕಿಸ್ತಾನದ ನುಸುಳುಕೋರರಿಗೆ ಸಹಾಯ ಮಾಡುತ್ತಿರುವ ಈ ಚೌಕಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದೇವೆ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಅಶೋಕ್ ನರೂಲಾ ಹೇಳಿದ್ದಾರೆ.

ಅದೇ ವೇಳೆ ಪಾಕಿಸ್ತಾನದ ಸೇನಾ ಚೌಕಿಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

No comments