ಬೀಫ್ ಫೆಸ್ಟಿವಲ್ ಆಯೋಜಿಸಿದ್ದ ಐಐಟಿ–ಮದ್ರಾಸ್ ಸಂಶೋಧನಾ ವಿದ್ಯಾರ್ಥಿ ಮೇಲೆ ಹಲ್ಲೆ
ಚೆನ್ನೈ: ದೇಶದಾದ್ಯಂತ ಗೋ ಹತ್ಯೆ ನಿಷೇಧಿಸಿರುವುದನ್ನು ಪ್ರತಿಭಟಿಸಿ ಮದ್ರಾಸ್ ಐಐಟಿಯಲ್ಲಿ ಆಯೋಜಿಸಲಾಗಿದ್ದ ಗೋಮಾಂಸ ಉತ್ಸವದಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಮಂಗಳವಾರ ಹಲ್ಲೆ ನಡೆಸಲಾಗಿದೆ.
ಏರೋಸ್ಪೇಸ್ ಇಂಜಿನಿಯರಿಂಗ್ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿ ಆರ್. ಸೂರಜ್ ಎಂಬುವವರ ಮೇಲೆ ಮಧ್ಯಾಹ್ನದ ಊಟದ ವೇಳೆ ವಸತಿನಿಲಯದ ಉಪಾಹಾರಗೃಹದಲ್ಲಿ ಆರೇಳು ಮಂದಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಹಲ್ಲೆಗೊಂಡ ವಿದ್ಯಾರ್ಥಿಯ ಬಲದ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ .ಹಲ್ಲೆಗೊಳಗಾದ ವ್ಯಕ್ತಿ ಹಿಂದೊಮ್ಮೆ ಕರ್ನಾಟಕದ ಕೋಲಾರದಲ್ಲಿ ಭಗವದ್ಗೀತೆಯನ್ನು ಹರಿದು ವಿವಾದ ಸ್ರಷ್ಟಿಸಿದ್ದ ಎಂದು ಮೂಲಗಳು ತಿಳಿಸಿವೆ .
.
No comments