Breaking News

ಪಾರ್ವತಮ್ಮ ರಾಜ್​ಕುಮಾರ್​ ಇನ್ನಿಲ್ಲ



ಬೆಂಗಳೂರು: ಕನ್ನಡ ಚಿತ್ರ ರಂಗದ  ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್​ಕುಮಾರ್​ (77) ಅವರು ಬುಧವಾರ ಬೆಳಗಿನ ಜಾವ  4.40 ಕ್ಕೆ  ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಅವರು ಹಲವು ದಿನಗಳಿಂದ ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ವರ್ಷಗಳಿಂದ ಪಾರ್ವತಮ್ಮ ಅವರು ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಕ್ಯಾನ್ಸರ್​ ಲಿವರ್​ಗೂ ಹರಡಿತ್ತು. ಜತೆಗೆ ಶುಗರ್​ ಮತ್ತು ಬಿಪಿ ಹೆಚ್ಚಳವಾಗಿತ್ತು. ಅವರು ಜಾಂಡೀಸ್​ನಿಂದಲೂ ಬಳಲುತ್ತಿದ್ದರು.

1939ರ ಡಿ.6ರಂದು ಸಾಲಿಗ್ರಾಮದಲ್ಲಿ ಜನಿಸಿದ್ದ ಪಾರ್ವತಮ್ಮ ಅವರು 1953ರ ಜುಲೈ 12ರಂದು ರಾಜ್​ಕುಮಾರ್​ ಜತೆ ಸಪ್ತಪದಿ ತುಳಿದಿದ್ದರು. ಪಾರ್ವತಮ್ಮ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


No comments