Breaking News

ಅಯೋಧ್ಯೆಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ 


ಉತ್ತರ ಪ್ರದೇಶ : ಡಿಸೆಂಬರ್ 6  1992  ಬಾಬ್ರಿ ಮಸೀದಿ ದ್ವ೦ಸದ ನಂತರ 2002 ರ ಅಂದಿನ  ಮುಖ್ಯ ಮಂತ್ರಿ ರಾಜನಾಥ್ ಸಿಂಗ್ ಅವರು ಅಯೋಧ್ಯೆಯಲ್ಲಿ ಶ್ರೀ ರಾಮನ ದರ್ಶನ ಪಡೆದಿದ್ದರು ನಂತರದ ಬೆಳವಣಿಗೆಯಲ್ಲಿ ಯಾವೊಬ್ಬ ಮುಖ್ಯ ಮಂತ್ರಿ ಕೂಡ ಶ್ರೀ ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಭೇಟಿ ನೀಡಿರಲಿಲ್ಲ  ಇದೀಗ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಇಂದು ರಾಮ್ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮನ ದರ್ಶನ ಪಡೆಯಲಿದ್ದಾರೆ .

ನಿನ್ನೆಯಷ್ಟೇ ಬಾಬ್ರಿ ಮಸೀದಿ  ದ್ವ೦ಸ ಬಗ್ಗೆ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಸಹಿತ ೧೨ ಮಂದಿ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ನಿಗದಿ ಮಾಡಿತ್ತು. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಯೋಗಿಯ ಮೊದಲ ಭೇಟಿ ಇದಾಗಿದೆ. ಫೈಜಾಬಾದ್- ಅಯೋಧ್ಯೆ ವಿಭಾಗದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆಗಾಗಿ ಸಿಎಂ ತೆರಳುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗೆ ವಿರೋಧ ಪಕ್ಷಗಳ ನಾಯಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ 

No comments