Breaking News

ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ


ಶಿರಸಿ :  ಯಲ್ಲಾಪುರ ಮೂಲದ   ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ ಮುಸ್ಲಿಂ ಯುವಕ ಹಿಂದೂ ಧರ್ಮಕ್ಕೆ ಮತಾಂತರಗೊಂಡು  ಪ್ರೀತಿಸಿದ ಯುವತಿ ಜತೆ ಸಪ್ತಪದಿ ತುಳಿದಿದ್ದಾನೆ .
ಪಟ್ಟಣದ ನೂತನ ನಗರದ ಹಸನ್ ರಹೀಮ್ ಖಾನ್ ನಾಲ್ಕು ವರ್ಷಗಳಿಂದ ಯಶೋದಾ ಎನ್ನುವ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಹಿಂದೂ ಧರ್ಮದ ಬಗ್ಗೆ ಒಲವು ಹೊಂದಿ ಶಾಸ್ತ್ರೋಕ್ತವಾಗಿ ಬುಧವಾರ ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮತಾಂತರದ ನಂತರ ಈತನ ಹೆಸರನ್ನು ರಾಹುಲ್ ಆರ್ಯ ಎಂದು ಬದಲಾಯಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ, ಭಜರಂಗ ದಳದ ಮಂಗೇಶ್ ಕೈಸರೆ ಹಾಗೂ ಕಾರ್ಯಕರ್ತರು, ವಧುವಿನ ಪಾಲಕರು ಉಪಸ್ಥಿತರಿದ್ದರು.   ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮುತಾಲಿಕ್ " ದೇಶದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮದುವೆಯಾಗಿ ಮತಾಂತರಗೊಳಿಸುವ ಷಡ್ಯಂತ್ರ ನಡೆಯುವುದಿಲ್ಲ. ಮುಸ್ಲಿಮರು ಕೂಡ ಮೂಲತಃ ಹಿಂದೂಗಳೇ ಆಗಿದ್ದರು.

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವವರಿಗೆ ಸ್ವಾಗತವಿದೆ. ಮುಸ್ಲಿಂ ಯುವಕನನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಿ, ಹಿಂದೂ ಯುವತಿಯೊಂದಿಗೆ ಮದುವೆ ಮಾಡಿಸುವ ಮೂಲಕ ಲವ್ ಜಿಹಾದ್ ಗೆ ಸೆಡ್ಡು  ಹೊಡೆದು ಸರಿಯಾದ ಉತ್ತರ ನೀಡಿದ್ದೇವೆ' ಎಂದರು.
ಪಾಲಕರ ಒಪ್ಪಿಗೆ ಪಡೆದು ಸ್ವ ಇಚ್ಛೆಯಿಂದ ಮತಾಂತರಗೊಂಡಿದ್ದೇನೆ. ಮತಾಂತರಗೊಳ್ಳುವಂತೆ ಅಥವಾ ಮತಾಂತರಗೊಳ್ಳದಂತೆ ಯಾರದೇ ಒತ್ತಡ ಅಥವಾ ಬೆದರಿಕೆ ಇರಲಿಲ್ಲ. ಇನ್ನು ಮುಂದೆ ಕೂಡ ಮತಾಂತರ ಗೊಂಡ ಬಗ್ಗೆ ಯಾವುದೇ ಬೆದರಿಕೆ ಬಂದರೂ ಎದುರಿಸುವ ಧೈರ್ಯವಿದೆ. ಉತ್ತಮ ಜೀವನ ನಡೆಸುವ ವಿಶ್ವಾಸವಿದೆ" ಎಂದರು.

No comments