Breaking News

ಸಂಚಲನ ಮೂಡಿಸಿದ ಪ್ರಿಯಾಂಕಾ ತುಂಡು ಬಟ್ಟೆ



ನವದೆಹಲಿ : ಬರ್ಲಿನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಉಡುಗೆಗೆ ಇದೀಗ ವ್ಯಾಪಕ ಟೀಕೆ ಸಾಮಾಜಿಕ ಜಲ ತಾಣದಲ್ಲಿ ವ್ಯಕ್ತ ವಾಗಿದೆ .
ಪ್ರಿಯಾಂಕಾ ಗಿಡ್ಡ ಬಟ್ಟೆ ಧರಿಸಿದ್ದು ಇದೇ ಮೊದಲಲ್ಲ. ಅಷ್ಟಕ್ಕೂ ಪ್ರಿಯಾಂಕಾ ಧರಿಸಿದ್ದ ಬಟ್ಟೆ ಅಸಭ್ಯವಾಗಿತ್ತಾ? ಎಂದರೆ ಅದೂ ಇಲ್ಲ. ಕೇವಲ ಆಕೆ ಕಾಲುಗಳು ಕಾಣುವಂಥ ಬಟ್ಟೆತೊಟ್ಟಿದ್ದರು. ಒಬ್ಬ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವಾಗ ಹೀಗೆ ಕಾಲು ಕಾಣುವಂಥ ಬಟ್ಟೆ ತೊಡಬಾರದಿತ್ತು ಎನ್ನುವುದು ನೆಟಿಜನ್ನರ ಅಭಿಪ್ರಾಯ.

ಪ್ರಿಯಾಂಕಾ ತೊಟ್ಟಿದ್ದ ಡ್ರೆಸ್ ವಿನ್ಯಾಸ ಮಾಡಿದ್ದವರು ಮಾರ್ಕ್ ಜೇಕಬ್ಸ್. ಕೆನೆ ಬಣ್ಣದ ಡ್ರೆಸ್‌ನಲ್ಲಿ ಅವರು ಮುದ್ದಾಗಿ ಕಾಣಿಸುತ್ತಿದ್ದರು. ‘ಮೋದಿಯವರನ್ನು ಭೇಟಿಯಾಗುವಾಗ ಪ್ರಿಯಾಂಕಾ ಕಾಲು ತೋರುವ  ಅವಶ್ಯಕತೆ ಇರಲಿಲ್ಲ’ ಎಂಬುದು ನೆಟಿಜನ್ನರ ಸಿಡುಕಿಗೆ ಕಾರಣ.
ಕೆಲವರಿಗೆ ಪ್ರಿಯಾಂಕಾರ ಉಡುಗೆ ‘ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತಿಲ್ಲ’ ಎಂದೂ ಅನಿಸಿದ್ದಿದೆ.
ಅಭಿಮಾನಿಗಳ ಚರ್ಚೆಗೆ ಪ್ರಿಯಾಂಕಾ  ಮಾತ್ರ ತಲೆ ಕೆಡೆಸಿಕೊಂಡಿಲ್ಲ.

 -prajavani

No comments