ಪೊಲೀಸರು ಮುಸ್ಲಿಮರನ್ನು isis ಗೆ ಸೇರುವಂತೆ ಪ್ರೇರೇಪಿಸುತ್ತಿದ್ದಾರೆ ದಿಗ್ವಿಜಯ್ ಸಿಂಗ್
ನವದೆಹಲಿ: ತೆಲಂಗಾಣದ ಪೊಲೀಸರು ಅಲ್ಲಿನ ಮುಸ್ಲಿಂ ಯುವಕರನ್ನು ಇಸ್ಲಾಮಿಕ್ ಸ್ಟೇಟ್‍ಗೆ ಸೇರುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿರುವ ಸಿಂಗ್, ದಕ್ಷಿಣ ಭಾರತದ ಈ ರಾಜ್ಯದ ಪೊಲೀಸರು ಐಎಸ್ಐಎಸ್ ನಕಲಿ ವೆಬ್‍ಸೈಟ್‍ಗಳನ್ನು ಮಾಡಿ, ಅದರಲ್ಲಿ ಕೆಲವು ಪ್ರಚೋದಕ ಮಾಹಿತಿ ಪ್ರಕಟಿಸುವ ಮೂಲಕ ಮುಸ್ಲಿಂ ಯುವಕರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಟ್ವೀಟಿಸಿದ್ದಾರೆ.
-prajavani
No comments