Breaking News

ಪಾಕಿಗಳ ರುಂಡ ಚೆಂಡಾಡಿ : ಹುತಾತ್ಮ ಯೋಧನ ಪುತ್ರಿಯ ಆಕ್ರೋಶನವದೆಹಲಿ : ಜಮ್ಮು ಕಾಶ್ಮೀರದ ಕೃಷ್ಣಾ ಘಾಟಿಯಲ್ಲಿ ತಂದೆಯ ಶಿರಚ್ಛೇದನ ಮಾಡಿದ ಪಾಕಿಸ್ತಾನ ಪಡೆಯ 50 ಯೋಧರ ತಲೆ ತೆಗೆಯಬೇಕು ಎಂದು ಬಿಎಸ್‌ಎಫ್‌ನ ಮುಖ್ಯ ಪೇದೆ ಹುತಾತ್ಮ ಯೋಧ ಪ್ರೇಮ್‌ ಸಾಗರ್‌ ಪುತ್ರಿ ಆಗ್ರಹಿಸಿದ್ದಾರೆ.

'ತಂದೆಯ ಬಲಿದಾನ ಮರೆಯಬಾರದು, ಅದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ 50 ಯೋಧರ ತಲೆ ತೆಗೆಯಬೇಕು,'ಎಂದು ತಾಯಿಯನ್ನು ಸಮಾಧಾನ ಪಡಿಸುತ್ತಾ ಸರೋಜ್‌ ಹೇಳಿದ್ದಾರೆ.

ಜಮ್ಮು-ಕಾಶ್ಮೀರ ನಿಯಂತ್ರಣ ರೇಖೆಯ ಕೃಷ್ಣ ಘಾಟಿ ವಲಯದ ಗಡಿಯಲ್ಲೊಂದು ಸಾವಿನ ಖೆಡ್ಡಾವನ್ನು ಸಿದ್ಧಪಡಿಸಿದ್ದ ಶತ್ರುಪಡೆ ನಮ್ಮ ಯೋಧರನ್ನು ಅದಕ್ಕೆ ಬೀಳಿಸುವಲ್ಲಿ ಸಫಲವಾಗಿತ್ತು. ಇದಕ್ಕಾಗಿ ಸುಮಾರು 250 ಮೀಟರ್‌ ದೂರ ಗಡಿ ದಾಟಿ ಬಂದ ಪಾಕ್‌ ಪಡೆ ನಮ್ಮ ಯೋಧರ ತಲೆ ಕಡಿದು ತನ್ನ ವಿಕೃತಿಯನ್ನು ಮೆರೆದಿದೆ.
via-toi
loading...

No comments