ಲಗ್ನ ಪತ್ರಿಕೆಯಲ್ಲಿ ವಿಘ್ನೇಶ್ವರ, ಮುಸ್ಲಿಂ ಯುವಕನ ವಿರುದ್ಧ ಧಾರ್ಮಿಕ ಗುರುಗಳು ಗರಂ, ಬಹಿಷ್ಕಾರದ ಬೆದರಿಕೆ.
ಮಧ್ಯಪ್ರದೇಶ : ಮಧ್ಯಪ್ರದೇಶದ ಜಾಬುವಾ ಎಂಬಲ್ಲಿ ಮುಸ್ಲಿಂ ಧರ್ಮೀಯ ಯುವಕನೋರ್ವ ತನ್ನ ಲಗ್ನ ಪತ್ರಿಕೆಯಲ್ಲಿ ವಿಘ್ನೇಶ್ವರನ ಫೋಟೋ ಅಚ್ಚಾಕಿಸಿದ ಕಾರಣ ಮುಸ್ಲಿಂ ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸಲೀಂ ಎಂಬ ಯುವಕ ತನಗೆ ಹಿಂದೂ ಗೆಳೆಯರು ಅಧಿಕವಾಗಿರುವ ಕಾರಣ ಲಗ್ನ ಪತ್ರಿಕೆಯ ಮೇಲೆ ವಿಘ್ನ ನಿವಾರಕ ಗಣಪತಿಯ ಫೋಟೋವನ್ನು ಅಚ್ಚೆ ಹಾಕಿಸಿ ತನ್ನ ಹಿಂದೂ ಗೆಳೆಯರಿಗೆ ವಿತರಿಸಿ ಮದುವೆಗೆ ಆಹ್ವಾನ ನೀಡಿದ್ದ.
ಸಲೀಂ ಗೆಳೆಯರೇನೋ ಲಗ್ನ ಪತ್ರಿಕೆ ಖುಷಿಯಿಂದ ತೆಗೆದುಕೊಂಡರು, ಆದರೆ ಮುಸ್ಲಿಂ ಧಾರ್ಮಿಕ ಗುರುಗಳು ಸಲೀಂ ತನ್ನ ಲಗ್ನ ಪತ್ರಿಕೆಗೆ ಅನ್ಯ ಧರ್ಮೀಯ ದೇವತೆಗಳ ಫೋಟೋ ಅಚ್ಚಾಕಿಸಿದ್ದರಿಂದ ಆತನ ವಿರುದ್ಧ ಕಿಡಿಕಾರಿದ್ದಾರೆ. ತಕ್ಷಣ ಲಗ್ನ ಪತ್ರಿಕೆಯಿಂದ ವಿಘ್ನೇಶ್ವರನ ಫೋಟೋ ತೆಗೆಸು ಇಲ್ಲವಾದಲ್ಲಿ ಮುಸ್ಲಿಂ ಧರ್ಮದಿಂದ ಬಹಿಷ್ಕಾರ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ.
ಇಷ್ಟೇ ಅಲ್ಲದೆ ಸಲೀಂ ಅಣ್ಣನಿಗೆ ದೇಶದ ವಿವಿದೆಡೆಗಳಿಂದ ಬೆದರಿಕೆ ಕರೆಗಳು ಬರುತ್ತಿದೆ. ಆದರೆ ಸಲೀಂ ಮಾತ್ರ ಆ ರೀತಿಯ ಬೆದರಿಕೆಗಳಿಗೆ ತಾವು ಕೇರ್ ಮಾಡುತ್ತಿಲ್ಲ ಎನ್ನುತ್ತಿದ್ದಾನೆ. ಮೊದಲು ತಾನು ಮನುಷ್ಯ, ಜತೆಗಿರುವ ಮನುಷ್ಯರನ್ನೂ ಗೌರವಿಸುವುದು ನಮ್ಮ ಜವಾಬ್ದಾರಿ, ಆ ಬಳಿಕವಷ್ಟೇ ಧರ್ಮ ಎನ್ನುತ್ತಿದ್ದಾನೆ.
loading...
No comments