Breaking News

ಕ್ಯಾನ್ಸರಿನ ಕೆಲವು ಲಕ್ಷಣಗಳು



ಮನುಷ್ಯರಿಗೆ ಅನೇಕ ವಿಧದ ಕ್ಯಾನ್ಸರ್‌ಗಳು ಬಾಧಿಸಬಹುದು. ವಿವಿಧ ಜನರು ಹಾಗೂ ಅವರ ಸ್ಥಿತಿಗಳಿಗೆ ಸಂಬಂಧಿಸಿದಂತೆ, ಕ್ಯಾನ್ಸರಿನ ಲಕ್ಷಣಗಳು ಮತ್ತು ಚಿಹ್ನೆಗಳಲ್ಲಿ ಭಿನ್ನತೆಯೂ ಇರಬಹುದು. ಯಾವ ಸೂಚನೆ ಅಥವಾ ಲಕ್ಷಣಗಳನ್ನು ತೋರಿಸದೆಯೂ, ಕೊನೆಯ ಹಂತದಲ್ಲಿ ಪತ್ತೆಯಾಗುವ ಕ್ಯಾನ್ಸರ್‌ ಪ್ರಕರಣಗಳೂ ಸಹ ಇವೆ. ಹಾಗಿದ್ದರೂ ಸಹ, ಕ್ಯಾನ್ಸರಿನ ಬಗ್ಗೆ ಅಪಾಯದ ಸೂಚನೆಯನ್ನು ನೀಡಿ, ವೈದ್ಯಕೀಯ ಸಲಹೆಯನ್ನು ಪಡೆಯುವಂತೆ ನಮ್ಮನ್ನು ಎಚ್ಚರಿಸುವ ಮುನ್ನೆಚ್ಚರಿಕೆ ಲಕ್ಷಣಗಳನ್ನು ನಾವು ಗುರುತಿಸಬಹುದು.
 1. ಅಕಾರಣವಾಗಿ ದೇಹದ ತೂಕ ಕಡಿಮೆಯಾಗುವುದು.
ದೇಹದ ತೂಕವು ಇದ್ದಕ್ಕಿದ್ದಂತೆಯೇ ಕಡಿಮೆಯಾಗುವುದು. ಒಮ್ಮಿಂದೊಮ್ಮೆಯೇ ಅಥವಾ ಒಂದು ತಿಂಗಳಲ್ಲಿಯೇ 4 ಕೆ.ಜಿ. ಅಥವಾ 5 ಕೆ.ಜಿ.ಯಷ್ಟು ತೂಕವು ಕಡಿಮೆಯಾಗುವುದು ಕ್ಯಾನ್ಸರಿನ ಸೂಚನೆಯಾಗಿರಬಹುದು. ದೊಡ್ಡ ಕರುಳು ಅಥವಾ ಜೀರ್ಣಾಂಗವ್ಯೂಹದ  ಮತ್ತಿತರ ಅಂಗಗಳ ಕ್ಯಾನ್ಸರ್‌ ಪ್ರಕರಣಗಳಲ್ಲಿ ಈ ಲಕ್ಷಣವು ವಿಶೇಷವಾಗಿ ಕಂಡು ಬರುತ್ತದೆ.
2. ದೇಹದ ಯಾವುದಾದರೂ ಭಾಗದಲ್ಲಿ ಕಾಣಿಸಿಕೊಳ್ಳುವ ಅಕಾರಣ ನೋವು ಸಹ ಯಾವುದೋ ಕ್ಯಾನ್ಸರಿನ ಇರುವಿಕೆಯನ್ನು ಸೂಚಿಸುತ್ತಿರಬಹುದು. ಪದೇಪದೇ ನೋವು ಮತ್ತೆ ಸ್ವಲ್ಪ ಸಮಯದ ನಂತರ ಮರುಕಳಿಸಿದರೆ, ಮತ್ತು ಯಾವುದೇ ರೀತಿಯ ದೈಹಿಕ ಗಾಯಗಳು ಅಥವಾ ಗಮನಾರ್ಹ ಲಕ್ಷಣಗಳು ಗೋಚರಿಸದಿದ್ದರೆ, ಆಗ ನೀವು ವೈದ್ಯರನ್ನು ಕಂಡು, ನಿಮ್ಮ ಸ್ಥಿತಿ ಹಾಗೂ ನೋವಿನ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ವಿವರವಾಗಿ ಹೇಳಿ, ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಾವಶ್ಯಕ.

ಯಾವಾಗ ನೋವು ಕಾಣಿಸಿಕೊಂಡಿತು, ಅದು ಯಾವ ರೀತಿಯ ನೋವು ಮತ್ತು ಯಾವ ರೀತಿಯಲ್ಲಿ ತೀವ್ರವಾಗುತ್ತದೆ ಎಂಬ ಬಗ್ಗೆ ಒಂದು ಟಿಪ್ಪಣಿಯನ್ನೂ ಮಾಡಿಕೊಳ್ಳಿ.

3. ಸಾಮಾನ್ಯವಾಗಿ ಜ್ವರವು ಯಾವುದೋ ಒಂದು ಸೋಂಕಿನ ಲಕ್ಷಣವಾಗಿರುತ್ತದೆ. ಅಂದರೆ ಇನ್‌ ಫುÉಯೆಂಜಾ ಅಥವಾ ಇನ್ನಿತರ ಬ್ಯಾಕ್ಟೀರಿಯಲ್‌ ಅಥವಾ ವೈರಲ್‌ ಸೋಂಕುಗಳು. ಆದರೆ, ಇದೂ ಸಹ ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ಸೂಚಿಸುತ್ತದೆ. ಲ್ಯುಕೇಮಿಯಾ ಅಥವಾ ಲಿಂಫೋಮಾದಂತಹ ರಕ್ತದ ಕ್ಯಾನ್ಸರ್‌ಗಳಲ್ಲಿ ಜ್ವರವೂ ಸಹ ಒಂದು ಆರಂಭಿಕ ಲಕ್ಷಣವಾಗಿರುತ್ತದೆ.

ಆದರೆ, ಖಂಡಿತವಾಗಿಯೂ, ಪ್ರತಿ ಸಲ ಜ್ವರ ಬಂದಾಗಲೂ ಸಹ ಭಯದಿಂದ ನೀವು ನಿಮ್ಮ ವೈದ್ಯರ ಬಳಿ ಓಡಬೇಕಾಗಿಲ್ಲ. ಅಕಾರಣವಾಗಿ, ದೀರ್ಘ‌ಕಾಲಿಕವಾಗಿ ಬಾಧಿಸುವ ಜ್ವರವನ್ನು ನಿರ್ಲಕ್ಷಿಸದೆ ಪರೀಕ್ಷೆ ಮಾಡಿಸಿಕೊಳ್ಳುವುದು ಆವಶ್ಯಕ ಎಂಬುದನ್ನು ಗಮನಿಸಬೇಕು.

4. ಶೀತ ಅಥವಾ ಇನ್‌ಫುÉಯೆಂಜಾಕ್ಕೆ ಸಂಬಂಧಿಸಿರದೆ, ಬಹಳ ಸಮಯದಿಂದ ಇರುವ (ಮೂರು ಅಥವಾ ನಾಲ್ಕು ವಾರಗಳಿಂದ ಬಾಧಿಸುವ) ಕೆಮ್ಮನ್ನು ನಿರ್ಲಕ್ಷಿಸಬಾರದು. ಇಂತಹ ಪ್ರಕರಣಗಳಲ್ಲಿ  ಶ್ವಾಸಕೋಶದ ಕ್ಯಾನ್ಸರಿನ ಸಂದೇಹವಿದ್ದಾಗ, ವಿಶೇಷವಾಗಿ ಧೂಮಪಾನಿಗಳಲ್ಲಿ ನಿಮ್ಮ ವೈದ್ಯರು ಗಂಟಲನ್ನು ಪರೀಕ್ಷಿಸುತ್ತಾರೆ, ಶ್ವಾಸಕೋಶದ ಚಟುವಟಿಕೆಯ ತಪಾಸಣೆ ಮಾಡುತ್ತಾರೆ ಮತ್ತು ಎಕ್ಸ್‌ರೇ ತೆಗೆಯಲು ಆದೇಶಿಸಬಹುದು.

5. ದುಗ್ಧ ಗ್ರಂಥಿಗಳು ಊದಿಕೊಳ್ಳುವುದು.

ನಮ್ಮ ಕುತ್ತಿಗೆ ಬದಿಗಳಲ್ಲಿ, ಕಂಕುಳಲ್ಲಿ ಮತ್ತು ತೊಡೆಯ ಸಂಧಿಗಳಲ್ಲಿ ದುಗ್ಧಗ್ರಂಥಿಗಳು ಇರುತ್ತವೆ. ಸಾಮಾನ್ಯವಾಗಿ ನಮಗೆ ಸ್ವಲ್ಪ ಮುಟ್ಟಿನ ಸೋಂಕು ಉಂಟಾದರೆ, ದುಗ್ಧ ಗ್ರಂಥಿಗಳು ಊದಿಕೊಳ್ಳುತ್ತವೆ ಮತ್ತು ಸೋಂಕು ಕಡಿಮೆಯಾದಾಗ ಊದಿಕೊಂಡಿರುವ ದುಗ್ಧ ಗ್ರಂಥಿ ಸರಿಹೋಗುತ್ತದೆ.
ಆದರೆ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ಈ ದುಗ್ಧ ಗ್ರಂಥಿಗಳು ಊದಿಕೊಳ್ಳುತ್ತಾ ಹೋದರೆ, ಅಥವಾ ಗಂಟುಗಳು ಬೆಳೆದು ಅವು ಕಡಿಮೆಯಾಗದೇ ಹೋದರೆ, ಮತ್ತು ಅವು ಸೋಂಕಿಗೆ ಸಂಬಂಧಿಸಿಲ್ಲದ ಲಕ್ಷಣಗಳಾಗಿದ್ದರೆ, ಆಗ ಅವು ಕ್ಯಾನ್ಸರಿಗೆ ಸಂಬಂಧಿಸಿದ, ಅಂದರೆ ರಕ್ತ ಅಥವಾ ದುಗ್ಧ ಗ್ರಂಥಿಗಳ ಕ್ಯಾನ್ಸರ್‌ ಆಗಿರಬಹುದೇ ಎಂಬ ಕಳವಳ ಉಂಟಾಗಬಹುದು.

6. ಬಾಯಿಯಲ್ಲಾಗುವ ಬದಲಾವಣೆಗಳು ಮತ್ತು ಹುಣ್ಣುಗಳು
ಒಂದು ವೇಳೆ ನೀವು ತಂಬಾಕು ಅಥವಾ ತಂಬಾಕಿನ ಉತ್ಪನ್ನಗಳನ್ನು ಸೇವಿಸುತ್ತಿದ್ದರೆ, ನಿಮ್ಮ ಬಾಯಿಯಲ್ಲಿ ಕ್ಯಾನ್ಸರಿನ ಲಕ್ಷಣಗಳು ಗೋಚರಿಸುತ್ತಿವೆಯೇ ಎಂದು ಗಮನಿಸಿ. ಲಕ್ಷಣಗಳು ಅಂದರೆ, ಬಾಯಿಯ ಶ್ಲೇಷ್ಮ ಪದರದಲ್ಲಿ ಬಿಳಿಯ ತೇಪೆಗಳು ಕಂಡು ಬರುವುದು, ನಾಲಗೆಯಲ್ಲಿ ಬಿಳಿಯ ಮಚ್ಚೆಗಳು ಕಾಣಿಸಿಕೊಳ್ಳುವುದು, ಬಾಯಿ ಅಥವಾ ತುಟಿಗಳಲ್ಲಿ  ಹುಣ್ಣುಗಳು ಕಾಣಿಸಿಕೊಳ್ಳುವುದು ಇತ್ಯಾದಿ.

ಚರ್ಮದ ಮೇಲೆ ಅಥವಾ ಜನನಾಂಗದ ಪ್ರದೇಶದಲ್ಲಿ ಕಾಣಿಸಿಕೊಂಡ ಯಾವುದಾದರೂ ವಾಸಿಯಾಗದ ಹುಣ್ಣುಗಳು, ಅತಿಯಾದ ಕೆಂಪು ಗುಳ್ಳೆಗಳು ಅಥವಾ ರಕ್ತಸ್ರಾವ... ಇವೆಲ್ಲವನ್ನೂ ಸಹ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು.

7. ಆಯಾಸ ಮತ್ತು ನಿಶ್ಶಕ್ತಿ
ಕೊನೆಯದಾಗಿ, ನಾವು ಕ್ಯಾನ್ಸರಿನ ಕೊನೆಯ ಸಂಭಾವ್ಯ ಮತ್ತು ಸಾಮಾನ್ಯವಾಗಿ ನಿರ್ಲಕ್ಷಿತವಾಗುವ ಲಕ್ಷಣಕ್ಕೆ ಬರೋಣ. ಆ ಲಕ್ಷಣ ಎಂದರೆ - ಆಯಾಸ. ನಮ್ಮ ದೈನಂದಿನ ಅನೇಕ ಸ್ಥಿತಿಗಳಲ್ಲಿ ಆಯಾಸ ಎಂಬ ಲಕ್ಷಣ ಇದ್ದೇ ಇರುತ್ತದೆ. ಹಾಗಾಗಿ, ಅದು ಕ್ಯಾನ್ಸರಿನದೇ ಕಾರಣದ ಲಕ್ಷಣ ಎಂಬ ತೀರ್ಮಾನಕ್ಕೆ ಬರುವುದು ಬಹಳ ಕಷ್ಟ.

ಹಾಗಿದ್ದರೂ ಸಹ, ಕ್ಯಾನ್ಸರಿನ ಆಯಾಸವು ನೀವು ಬಹಳ ವಿಶ್ರಾಂತಿಯಲ್ಲಿದ್ದರೂ, ಯಾವುದೇ ಕಾರ್ಯದಲ್ಲಿ ತೊಡಗಿಲ್ಲವಾಗಿದ್ದರೂ ಸಹ ಕಾಡುತ್ತದೆ. ಕ್ಯಾನ್ಸರಿನ ಆಯಾಸವು ಬಹಳ ದೀರ್ಘ‌ಕಾಲಿಕವಾಗಿದ್ದು, ಆಯಾಸದ ಜೊತೆಗೆ ಅಕಾರಣ ನಿಶ್ಶಕ್ತಿಯೂ ಸಹ ಬಾಧಿಸಬಹುದು.

ಮೇಲೆ ವಿವರಿಸಿದ  ಚಿಹ್ನೆಗಳು ಮತ್ತು ಲಕ್ಷಣಗಳು ಸಮಸ್ಯೆ ಒಂದರ ಸೂಕ್ಷ್ಮ ಮತ್ತು ಅಸ್ಪಷ್ಟ ಸೂಚಕಗಳು ಎಂಬುದನ್ನು ನೀವು ಗಮನಿಸಿರಬಹುದು. ಕ್ಯಾನ್ಸರಿನ ಲಕ್ಷಣಗಳನ್ನು ಮತ್ತು ಚಿಹ್ನೆಗಳನ್ನು ಗುರುತಿಸಿ, ಪ್ರತ್ಯೇಕಿಸುವುದು ಅಷ್ಟೊಂದು ಸುಲಭವಲ್ಲ. ನಿಮ್ಮಷ್ಟಕ್ಕೇ ನೀವೇ ಪರೀಕ್ಷಿಸಿ ಅಥವಾ ಕಲ್ಪಿಸಿಕೊಂಡು ನಿಮಗೆ ಕ್ಯಾನ್ಸರ್‌ ಇದೆ ಎಂದು ಕಂಗಾಲಾಗಬೇಕಾಗಿಲ್ಲ.

ಒಂದು ವಿಷಯವನ್ನು ನೆನಪಿನಲ್ಲಿಡಿ. ಮೇಲೆ ಹೇಳಿದ ಲಕ್ಷಣಗಳು ಮತ್ತೆ ಮತ್ತೆ ಕಾಣಿಸಿಕೊಂಡರೆ, ಅಕಾರಣವಾಗಿ ಬಾಧಿಸಿದರೆ, ಈ ಬಗ್ಗೆ ನಿಮಗೆ ಕಳವಳಗಳಿದ್ದರೆ, ವೈದ್ಯರಲ್ಲಿ  ನೀವು ಚರ್ಚಿಸಬಹುದು; ಪರೀಕ್ಷೆ ಮಾಡಿಸಿಕೊಳ್ಳಬಹುದು. ಪರೀಕ್ಷೆಯ ಫಲಿತಾಂಶದಲ್ಲಿ ಏನೂ ಇಲ್ಲ ಎಂದು ಬರಬಹುದು ಅಥವಾ ಪರೀಕ್ಷೆಯು ನಿಮ್ಮ ಜೀವವನ್ನೂ ರಕ್ಷಿಸಬಹುದು.

ಕ್ಯಾನ್ಸರ್‌ ಎಂಬುದು ಬರಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಅಲ್ಲ. ಸಾಮಾಜಿಕ, ಆರ್ಥಿಕ, ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ಮೇಲೆ ತೀವ್ರ ತೊಡಕನ್ನು ಉಂಟು ಮಾಡುವ ಸಮಸ್ಯೆ. ಕ್ಯಾನ್ಸರಿಗೆ ಯಾವುದೇ ಭೇದ ಭಾವಗಳಿಲ್ಲ. ಇದು

ಎಲ್ಲ ವಯೋಮಾನದವರನ್ನೂ ಬಾಧಿಸಬಲ್ಲಂತಹ, ವಿಶ್ವ ವ್ಯಾಪಿ ವ್ಯಾಧಿಯಾಗಿದ್ದರೂ, ಕೆಳ ಮತ್ತು ಮಧ್ಯಮ ಅಭಿವೃದ್ಧಿಯ ರಾಷ್ಟ್ರಗಳಲ್ಲಿ  ಇದರ ಹೊರೆ ಹೆಚ್ಚು. ಮರಣ ದಂಡನೆಯಂತಿದ್ದ ಅನೇಕ ರೀತಿಯ ಕ್ಯಾನ್ಸರ್‌ಗಳಿಗೆ  ಇಂದು ಚಿಕಿತ್ಸೆ ಸಾಧ್ಯವೆನಿಸಿದೆ. ಕ್ಯಾನ್ಸರ್‌ ಇರುವ ಬಹಳಷ್ಟು ಜನರು ಪರಿಣಾಮಕಾರಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

loading...

No comments