Breaking News

ಗೋವು , ಗಂಗಾನದಿ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದರೆ ತಪ್ಪೇನು: ಆದಿತ್ಯನಾಥ್‌


ಲಖನೌ: 'ಗೋವುಗಳ ಬಗ್ಗೆ, ಗಂಗಾನದಿ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದರೆ ತಪ್ಪೇನು,'' ಎಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಬಗ್ಗೆ ನಡೆದ ಚರ್ಚೆ ವೇಳೆ ಆದಿತ್ಯನಾಥ ಹೇಳಿದ್ದಾರೆ.
'ಗಾಯ…, ಗಂಗಾ, ಗೋರಕ್ಷಾ (ಹಸು, ಗಂಗಾ ನದಿ ಮತ್ತು ಗೋರಕ್ಷ ಣೆ ) ಈ ಮೂರು ವಿಷಯಗಳ ಬಗ್ಗೆ ಮಾತ್ರ ಸರ್ಕಾರ ಗಮನ ಹರಿಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.

ಇದಕ್ಕೆ ಪ್ರತಿಕ್ರಿಯಿಸಿರುವ ಆದಿತ್ಯನಾಥ್‌ ''ಗಂಗಾ, ಯಮುನ ನದಿಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಈ ನದಿಗಳು ಬತ್ತಿಹೋದರೆ ನಮ್ಮ ದೇಶವೂ, ಸಂಸ್ಕೃತಿಯೂ ಕಳೆದುಹೋಗುತ್ತದೆ. ರಾಜಕೀಯದೊಂದಿಗೆ ಯಾವುದೇ ಸಂಬಂಧ ಹೊಂದಿರದ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಆರ್‌ಎಸ್‌ಎಸ್‌ ಎಂದಿಗೂ ಸರಕಾರದಿಂದ ಸಹಾಯ ಪಡೆದಿಲ್ಲ. ಕೆಲವರು ರಾಷ್ಟ್ರಗೀತೆಯನ್ನು ಕೋಮುವಾದದೊಂದಿಗೆ ತಳುಕು ಹಾಕುತ್ತಾರೆ. ಒಂದು ವೇಳೆ ಆರ್‌ಎಸ್‌ಎಸ್‌ ಮತ್ತು ಡಾ. ಶ್ಯಾಮ ಪ್ರಸಾದ್‌ ಮುಖರ್ಜಿ (ಜನ ಸಂಘದ ಸಂಸ್ಥಾಪಕರು) ಇಲ್ಲದೇ ಹೋಗಿದ್ದರೆ, ಶಾಲೆಯಲ್ಲಿ ವಂದೇ ಮಾತರಂ ಹಾಡುವುದನ್ನು ಜನರು ಮರೆತು ಬಿಡುತ್ತಿದ್ದರು. ಪಶ್ಚಿಮ ಬಂಗಾಳ, ಪಂಜಾಬ್‌ ಮತ್ತು ಕಾಶ್ಮೀರ ಪಾಕಿಸ್ತಾನದ ಪಾಲಾಗುತ್ತಿದ್ದವು,'' ಆದಿತ್ಯನಾಥ್‌ ಹೇಳಿದ್ದಾರೆ.

loading...

No comments