Breaking News

ಶ್ರೀಕೃಷ್ಣ ಮಠದಲ್ಲಿ ನಮಾಜ್, ಇಫ್ತಾರ್ ಕೂಟ ವಿರೋಧಿಸಿ ಜು. 2ರಂದು ಪ್ರತಿಭಟನೆ :ಮುತಾಲಿಕ್


ಹುಬ್ಬಳ್ಳಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ನಮಾಜ್ ಹಾಗೂ ಇಫ್ತಾರ್ ಕೂಟ ಆಯೋಜಿಸಿದ  ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಶ್ರೀಗಳು ಹಿಂದೂ ಸಮಾಜವನ್ನು ಅವಮಾನಿಸಿದ್ದಾರೆ. ಅವರ ಧೋರಣೆ ಖಂಡಿಸಿ ಜುಲೈ 2 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು ಶ್ರೀಗಳು ಮಧ್ವಾಚಾರ್ಯರ ಬಗ್ಗೆ ಹೇಳುತ್ತಾರೆ, ಅವರು ಪವಾಡ ಪುರಷರು. ಅವರು ಎಂದು ಮುಸ್ಲಿಂರನ್ನ ಮಠದಲ್ಲಿ ನಮಾಜ್ ಹಾಗೂ ಇಫ್ತಾರ್ ಮಾಡಿ ಎಂದು ಹೇಳಿಲ್ಲ ಎಂದರು.
ಮುಸ್ಲಿಂರು ಮಠಕ್ಕೆ ಭೂಮಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಆದರೆ ಮುಸ್ಲಿಂರು ಆಕ್ರಮಣ ಮಾಡುವರು. ಆಯೋಧ್ಯ ಭೂಮಿಯಲ್ಲಿ ಕೇವಲ ರಾಮ ಮಂದಿರ ಅಂತ ಹೇಳಿದ್ದಿರಿ. ಬಾಬರ್ ಮಸೀದಿ ಮಾಡಲು ಬಿಡುವದಿಲ್ಲ ಎಂದು ಹೇಳಿದ್ದಿರಿ.
ಅವತ್ಯಾಕೆ ಸೌಹಾರ್ದ ನಿಮ್ಮಲ್ಲಿ ಬರಲಿಲ್ಲ. ಈಗ್ಯಾಕೆ ನಿಮಗೆ ಸೌಹಾರ್ದ ನೆನಪಾಯಿತು ಎಂದು ಪೇಜಾವರ ಶ್ರೀಗಳನ್ನು ಅವರು ಪ್ರಶ್ನಿಸಿದರು.


No comments