ಮುಂಬಯಿ ಸರಣಿ ಸ್ಫೋಟ ಉಗ್ರ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವು
ಮುಂಬಯಿ: 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣದ ಉಗ್ರ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮುಸ್ತಫಾನಿಗೆ ಇಂದು ಮುಂಜಾನೆ 3ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆತನನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೈಪರ್ ಟೆನ್ಸನ್ ಮತ್ತು ಡಯಾಬಿಟಿಸ್ ನಿಂದ ಬಳಲುತ್ತಿದ್ದ ದೊಸ್ಸಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಸರಣಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಮುಸ್ತಫಾ ದೊಸ್ಸಾ ಟಾಡಾ ಕೋರ್ಟ್ ತೀರ್ಪು ನೀಡಿತ್ತು. ಆರ್ಥೂರ್ ಕಾರಾಗೃಹದಲ್ಲಿದ್ದ ದೊಸ್ಸಾಗೆ ಇಂದು ಮುಸ್ತಪಾ ದೊಸ್ಸಾಗೆ ಗಲ್ಲು ಶಿಕ್ಷೆ ನೀಡಬೇಕೆಂದು ಕೋರಿ ಮಂಗಳವಾರ ಸಿಬಿಐ ಮನವಿ ಸಲ್ಲಿಸಿತ್ತು. 1993ರ ಮುಂಬಯಿ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ದೊಸ್ಸಾಗೆ ಅಧಿಕ ಶಿಕ್ಷೆ ವಿಧಿಸಬೇಕೆಂದು ಸಿಬಿಐ ಕೋರಿತ್ತು.
1993ರ ಮಾರ್ಚ್ 12ರಂದು ನಡೆದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟು, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು. ರು. 27 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿತ್ತು.
No comments