ಗೋ ಮಾಂಸ ಸೇವನೆ ಮಾಡಿದ ಸಂಘಟನೆ ಕಪ್ಪು ಪಟ್ಟಿಗೆ
ಮೈಸೂರು : ಕೇಂದ್ರದ ಗೋ ಮಾರಾಟ ,ವ್ಯಾಪಾರ ನಿರ್ಬಂಧ ಕಾಯ್ದೆ ಜಾರಿ ವಿರೋಧಿಸಿ ಭಾನುವಾರ ಕಾರ್ಯಕ್ರಮದಲ್ಲಿ ಪ್ರಗತಿಪರರಿಂದ ಗೋ ಮಾಂಸ ಸೇವನೆ ಹಿನ್ನೆಲೆಯಲ್ಲಿ ಗೋ ಮಾಂಸ ಸೇವನೆ ಮಾಡಿದ ಸಂಘಟನೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ
ಸಂಘಟನೆಯವರು ಕಟ್ಟಿದ್ದ ಹಣವನ್ನು ಮುಟ್ಟುಗೊಲು ಹಾಕಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಮೈಸೂರಿನಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಂತಹ ಘಟನೆ ಮತ್ತೊಮ್ಮೆ ಮರುಕಳುಹಿಸದಂತೆ ಮುನ್ನಚ್ಚರಿಕೆ ವಹಿಸಲಾಗುವುದು. ಸರ್ಕಾರಿ ಕಟ್ಟಡಗಳಲ್ಲಿ ಗೋ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ ಎಂದರು. ಈ ಕುರಿತು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಪ್ರತಿಕ್ರಿಯೆ ನೀಡಿ ಕಾರ್ಯಕ್ರಮದಲ್ಲಿ ಗೋ ಮಾಂಸ ಸೇವನೆ ವಿಚಾರ ಅರಿವಿಗೆ ಬಂದಿಲ್ಲ. ಈಗಾಗಲೇ ಕಾರ್ಯಕ್ರಮ ಆಯೋಜಿಸಿದ್ದ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಉನ್ನತ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರ್ಕಾರಿ ಕಟ್ಟಡದಲ್ಲಿ ಗೋ ಮಾಂಸ ತಿನ್ನಲು ಅನುಮತಿ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರೊ.ಭಗವಾನ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಮನೆಯಂಗಳದಲ್ಲಿ ಗೋ ಮಾಂಸ ಸೇವನೆಗೆ ಅವಕಾಶ ಕಲ್ಪಿಸಿದ ಕನ್ನಡ ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಚೆನ್ನಪ್ಪ ವಜಾಕ್ಕೆ ಕೆಲವು ಸಂಘಟನೆಗಳು ಆಗ್ರಹಿಸಿವೆ.
-sanjevaani
 

 
No comments