Breaking News

ನವೆಂಬರ್‌ನಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಿನಾಂಕ ನಿಗದಿ :ಸಾಕ್ಷಿ ಮಹಾರಾಜ್



ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಆರಂಭಿಸುವ ದಿನಾಂಕವನ್ನು ಈ ವರ್ಷದ ನವೆಂಬರ್‌ನಲ್ಲಿ ಘೋಷಿಸಲಾಗುವುದು ಎಂದು ಬಿಜೆಪಿ ಸಂಸದ ಮತ್ತು ಹಿಂದೂ ಮುಖಂಡ ಸಾಕ್ಷಿ ಮಹಾರಾಜ್‌ ಹೇಳಿದ್ದಾರೆ.
‘ಸಂತರ ಸಭೆಯಲ್ಲಿ ದಿನಾಂಕ ಪ್ರಕಟಿಸಲಾಗುವುದು’ ಎಂದು ತಮ್ಮ ಲೋಕಸಭಾ ಕ್ಷೇತ್ರ ಉನ್ನಾವ್‌ನಲ್ಲಿ ಅವರು  ಹೇಳಿದ್ದಾರೆ.ರಾಮಮಂದಿರ ನಿರ್ಮಾಣ ಕುರಿತುಸ್ವೀಕಾರಾರ್ಹ ಪರಿಹಾರ ಪಡೆಯುವ ಪ್ರಯತ್ನಗಳುನಡೆದಿವೆ. ಬಹಳಷ್ಟು ಮುಸ್ಲಿಮರು ಈಗಾಗಲೇ ನಿಗದಿ ಪಡಿಸಿದ ಸ್ಥಳದಲ್ಲೇ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಒಪ್ಪಿಗೆಯನ್ನು ತೋರಿಸುತ್ತಿದ್ದಾರೆ.ಕೆಲವು ಮುಸ್ಲಿಂ ಮುಖಂಡರು ಈಗಾಗಲೇ ಸಂತರು ಹಾಗೂ ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಇದು ಪರಿಹಾರ ಕಂಡುಕೊಳ್ಳುತ್ತದೆ ಮತ್ತು ಸಂತರ ಸಭೆಯು ನವೆಂಬರ್­ನಲ್ಲಿ ನಡೆಯಲಿದ್ದು, ನಂತರ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

No comments