Breaking News

200 ವರ್ಷದಿಂದ ನಡೆದು ಬಂದ ಆಚರಣೆಗೆ ಅಧಿಕಾರ ಸಿಕ್ಕ ಮೊದಲ ವರ್ಷದಲ್ಲೇ ಬ್ರೇಕ್



ವಾಷಿಂಗ್ಟನ್ :ಸುಮಾರು 200 ವರ್ಷಗಳ ಹಿಂದೆ ರಂಜಾನ್ ಔತಣಕೂಟ ನೀಡುವ ಸಂಪ್ರದಾಯ ಅಂದಿನ ಅಧ್ಯಕ್ಷ ಜೆಫರ್ಸನ್ ಅವರ ಅವಧಿಯಲ್ಲಿ ಆರಂಭವಾಯಿತು. ಜೆಫರ್ಸನ್ ಹುಟ್ಟುಹಾಕಿದ್ದ ಈ ಸಂಪ್ರದಾಯವನ್ನು ಕೆಲವರು ಪಾಲಿಸಿದರೆ, ಇನ್ನು ಕೆಲವರು ಪಾಲಿಸಲಿಲ್ಲ. ಆದರೆ 1990ರಲ್ಲಿ ಬಿಲ್ ಕ್ಲಿಂಟನ್ ಅಧ್ಯಕ್ಷರಾಗಿದ್ದಾಗ ಮುಸ್ಲಿಮರಿಗೆ ಔತಣಕೂಟಕ್ಕಾಗಿ ವಿಶೇಷ ಆಸಕ್ತಿ ವಹಿಸಿದ್ದರು, ಸ್ವತಃ ಕ್ಲಿಂಟನ್ ಅವರ ಪತ್ನಿ ಹಿಲರಿ ಕ್ಲಿಂಟನ್ ಅವರೇ ಇಫ್ತಾರ್ ಸಿದ್ಧತೆಯ ಮೇಲ್ವಿಚಾರಣೆ ವಹಿಸುತ್ತಿದ್ದರು. ಕ್ಲಿಂಟನ್ ನಂತರ ಅಧಿಕಾರಕ್ಕೆ ಬಂದ ಜಾರ್ಜ್ ಬುಷ್ ಒಂದು ಕಡೆ ಮುಸ್ಲಿಂ ದೇಶಗಳ ಮೇಲೆ ಯುದ್ಧ ಮಾಡಿದರೂ, ಮತ್ತೊಂದು ಕಡೆ ಶ್ವೇತಭವನದಲ್ಲಿ ಇಫ್ತಾರ್ ನೀಡುವುದು ಬಿಟ್ಟಿರಲಿಲ್ಲ. ಬರಾಕ್ ಒಬಾಮಾ ಆಡಳಿತದಲ್ಲೂ ರಂಜಾನ್ ಔತಣಕೂಟ ನಡೆಯುತ್ತಿತ್ತು. 20 ವರ್ಷಗಳಿಂದ ಸತತವಾಗಿ ತಪ್ಪದೇ ನಡೆದುಕೊಂಡು ಬಂದಿದ್ದ ಈ ಸಂಪ್ರದಾಯವನ್ನು ಟ್ರಂಪ್ ಸರ್ಕಾರ ಮುರಿದಿದೆ.

No comments