Breaking News

ಭಯೋತ್ಪಾದನೆ ವಿರುದ್ಧ ಸಮರ ಸಾರಿದ ಉಭಯ ದೇಶಗಳ ನಾಯಕರು



ವಾಷಿಂಗ್ಟನ್‌: ಇಸ್ಲಾಮಿಕ್‌ ಭಯೋತ್ಪಾದನೆ ದಮನ, ಉಗ್ರರ  ನಿರ್ನಾಮ ಹಾಗೂ ಭಯೋತ್ಪಾದನೆ ವಿರುದ್ದ ಸಮರ ಸಾರುವುದಾಗಿ   ಉಭಯ ದೇಶಗಳ ನಾಯಕರುಗಳು ಹೇಳಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್‌ ಮತ್ತು ಮೋದಿಯವರು ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಉಭಯ ರಾಷ್ಟ್ರದ ನಾಯಕರು ಜಂಟಿ ಹೇಳಿಕೆ ನೀಡಿದ್ದು, ಗಡಿಪ್ರದೇಶಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನೆಸಗುವುದನ್ನು ನಿಲ್ಲಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ನೀಡಿದ್ದಾರೆ.

ಭಯೋತ್ಪಾದನೆ, ಉಗ್ರವಾದವನ್ನು ಬುಡ ಸಮೇತ ಕಿತ್ತೊಗೆಯಲು ಉಭಯ ರಾಷ್ಟ್ರಗಳು ಜತೆಯಾಗಿ ನಿಲ್ಲಲಿವೆ ಎಂದು ಮೋದಿ ಹೇಳಿದ್ದು, ಉಗ್ರ ಸಂಘಟನೆಗಳನ್ನು ನಾಶ ಮಾಡಲು ಎರಡೂ ರಾಷ್ಟ್ರಗಳು ಸನ್ನದ್ಧವಾಗಿವೆ ಎಂದಿದ್ದಾರೆ ಟ್ರಂಪ್.

ಎರಡೂ ದೇಶಗಳು ಪ್ರಗತಿಯ ಎಂಜಿನ್‌ ಇದ್ದಂತೆ, ವ್ಯಾಪಾರ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಪೆಸಿಫಿಕ್‌ ಪ್ರದೇಶದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಬದ್ಧ,' ಎಂದು ಜಂಟಿ ಗೋಷ್ಠಿಯಲ್ಲಿ ಹೇಳಿದ್ದಾರೆ.

ಶ್ವೇತ ಭವನದಲ್ಲಿ ನೀಡಿದ ಈ ಅಭೂತಪೂರ್ವ ಔತಣ 1.25 ಶತಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಮೋದಿ ಹೊಗಳಿದ್ದಾರೆ. 2014ರಲ್ಲಿ ಟ್ರಂಪ್‌ ಅವರ ಭಾರತ ಭೇಟಿ ವೇಳೆ ನೀಡಿದ ಸಂದರ್ಶನದಲ್ಲಿ ಹೊಗಳಿದ್ದನ್ನು ಸ್ಮರಿಸಿದ ಮೋದಿ, ಮೆಚ್ಚುಗೆಯ ನುಡಿಗೆ ಧನ್ಯವಾದ ಹೇಳಿದ್ದಾರೆ.

No comments