ಗ್ಯಾಸ್ಟ್ರಿ ಕ್ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ?
ಪರಿಹಾರ ಸರಳವಲ್ಲ , ನಿಜ. ಹಾಗೆಂದು ಉದರದ ಸಮಸ್ಯೆಗಳು ಕಾಣಿಸಿಕೊಂಡಾಗಲೆಲ್ಲಾ ಗ್ಯಾಸ್ಟ್ರಿಕ್ ಎಂದೇ ನಿರ್ಲಕ್ಷಿಸಿದರೆ, ಪರಿಹಾರ ಸಾಧ್ಯವಾಗಬಹುದಾದ ಸಮಸ್ಯೆಗಳೂ ಹಾಗೆಯೇ ಉಳಿದು ಬಿಡುತ್ತವೆ . ಉದಾಹರಣೆಗೆ, ಪಿತ್ತಕೋಶದ ಕಲ್ಲು, ಕರುಳಿನ ಹುಣ್ಣು... ಇತ್ಯಾದಿ.
ಗ್ಯಾಸ್ಟ್ರಿ ಕ್ ಎಂದು ತಪ್ಪು ತಿಳಿವಳಿಕೆಯಿಂದ ಕ್ಯಾನ್ಸರ್‌ನ್ನು ತಿಂಗಳಾನುಗಟ್ಟಲೆ ಅಲಕ್ಷಿಸಿದವರೂ ಇದ್ದಾರೆ. ಆದ್ದರಿಂದ, ಯಾವುದೇ ಉದರ ರೋಗ ಲಕ್ಷಣಗಳಿದ್ದು , ಅವು ಕೆಲದಿನಗಳಲ್ಲಿ ಪರಿಹಾರವಾಗದ್ದಿದರೆ, ತಜ್ಞರ ಸಲಹೆ ಒಂದು ಬಾರಿಯಾದರೂ ಪಡೆಯುವುದು ಶ್ರೇಯಸ್ಕರ. ಹಲವು ಸಲ ಬರೀ ರೋಗಲಕ್ಷಣದ ವಿವರಣೆ ಕೇಳಿ ಕೊಡುವ ಔಷಧಿಯೇ ಸಾಕಾಗಬಹುದು. ಕೆಲವೊಮ್ಮೆ ಮಲಪರೀಕ್ಷೆ , ಅಲ್ಟ್ರಾಸೌಂಡ್...
ಇತ್ಯಾದಿ ಸರಳ ತಪಾಸಣೆಗಳು
ಬೇಕಾಗ ಬಹುದು. ಒಮ್ಮೊಮ್ಮೆ, ಅದರಲ್ಲೂ ಸಾಕಷ್ಟು ದಿನಗಳಿಂದ ನರಳುತ್ತಿರುವ ರೋಗಿಗೆ ಎಂಡೊಸ್ಕೋಪಿ, ಸಿ.ಟಿ. ಸ್ಕ್ಯಾನ್ ಇತ್ಯಾದಿ ಘನ ತಪಾಸಣೆಗಳ ಸಲಹೆ ಮಾಡಲಾಗುತ್ತದೆ. ಆಪರೂಪಕ್ಕೆ ರೋಗ ಪತ್ತೆಗಾಗಿಯೇ ಉದರದರ್ಶಕ ಪರೀಕ್ಷೆ ನಡೆಸಬೇಕಾಗುವುದು ಉಂಟು.
ವಿಶೇಷವೆಂದರೆ, ಹಲವು ರೋಗಿಗಳಲ್ಲಿ ಯಾವುದೇ ತಪಾಸಣೆಯಲ್ಲಿಯೂ ದೋಷ ಕಂಡು ಬರುವುದಿಲ್ಲ. ಇವರೇ ನಿಜವಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳು ಎನ್ನಬಹುದು. ಇವರ ಸಮಸ್ಯೆಯ ಪರಿಹಾರ ಕ್ಷಿಷ್ಟ . ಮೊಟ್ಟ ಮೊದಲಾಗಿ ಅವರ ಆಹಾರ ಕ್ರಮವನ್ನು ಪರಿಶೀಲಿಸಿ, ಪರಿಷ್ಕರಿಸಿಕೊಳ್ಳಬೇಕಾದಲ್ಲಿ ಸೂಕ್ತ ಸಲಹೆ ನೀಡಲಾಗುತ್ತದೆ. ನಾವು ತಿನ್ನುವ ಆಹಾರಕ್ಕೂ ಉದರದ ಸಮಸ್ಯೆಗಳಿಗೂ ನೇರ ಸಂಬಂಧವಿರುವುದರಿಂದ, ಯಾವ ಆಹಾರ ತಿಂದ ತರುವಾಯ ಸಮಸ್ಯೆ ಉಲ್ಬಣಿಸುತ್ತದೆ ಎಂಬುದನ್ನು ರೋಗಿಯೇ ಪರಿಶೀಲನೆಯ ಮೂಲಕ ಪತ್ತೆ ಹಚ್ಚಿ , ಆಹಾರವನ್ನು ಬದಲಿಸಿಕೊಳ್ಳಬೇಕು.
ಉದಾಹರಣೆಗೆ, ಹಲವು ಜನರಲ್ಲಿ ಗೋಧಿ, ಹಾಲು, ಬೇಳೆ ಇತ್ಯಾದಿ ಆಹಾರಗಳು ಸರಿಯಾಗಿ ಪಚನವಾಗುವುದಿಲ್ಲ . ಅವರಿಗೆ ಈ ತೆರನ ಆಹಾರ ಸೇವನೆಯ ನಂತರ ಉದರದ ಸಮಸ್ಯೆ ತಲೆದೋರುತ್ತಿದ್ದಲ್ಲಿ, ಅಂತಹವರು ಆಯಾ ಆಹಾರ-ಪದಾರ್ಥಗಳನ್ನು ವರ್ಜಿಸದೇ ಅನ್ಯ ದಾರಿಯಿಲ್ಲ .
ಇನ್ನು ದೈನಂದಿನ ಆಹಾರ ಸೇವನೆಯೂ ನಿಯಮಿತ ಸಮಯದಲ್ಲಿ ನಡೆಯಬೇಕಾದದ್ದು ಆವಶ್ಯಕ.ಒಂದೊಂದು ದಿನ ಒಂದೊಂದು ಸಮಯದಲ್ಲಿ ಊಟ-ತಿಂಡಿ ಮಾಡಿದ್ದೇ ಆದರೆ, ಮಾನವನ ಜೀರ್ಣಾಂಗ ವ್ಯೂಹ ಗಲಿಬಿಲಿಯಾಗಿ, ಸರಿಯಾಗಿ ಕೆಲಸ ಮಾಡದು. ಆಹಾರ ಸೇವಿಸುವಾಗ ಅವಸರಿಸದೇ ಇರುವುದು ಮತ್ತು ಹೆಚ್ಚು ಮಾತನಾಡದೇ ಇರುವುದು ಅಪೇಕ್ಷಣೀಯ. ಗಬಗಬನೇ ನುಂಗುವುದರಿಂದ
ಇಲ್ಲವೇ ಎಡೆಬಿಡದೇ ಮಾತನಾಡುತ್ತಲೇ ತಿನ್ನು ವುದರಿಂದ ಆವಶ್ಯಕತೆಗಿಂತ ಹೆಚ್ಚಿನ ಗಾಳಿ ನುಂಗಲ್ಪಟ್ಟು, ಜಠರವನ್ನು ಸೇರುತ್ತದೆ. ಭರ್ಜರಿ ಊಟದ ನಂತರ ಢರ್ರೆಂದು ಹೊರಬರುವ ತೇಗು ನಾವು ನುಂಗಿದ ಗಾಳಿಯಲ್ಲದೇ ಬೇರೇನೂ ಅಲ್ಲ .
ಆಹಾರದಲ್ಲಿ ಮೊಸರು ಆಥವಾ ಮಜ್ಜಿಗೆಯನ್ನು ಬಳಸುವುದು ಜೀರ್ಣಾಂಗದ ಆರೋಗ್ಯಕ್ಕೆ ಪೂರಕವೆಂದು ಈಗಾಗಲೇ ದೃಢ ಪಟ್ಟಿ ದೆ. ಭಾರತೀಯ ಸಂಸ್ಕೃತಿಯಲ್ಲಿ ಊಟದ ಕೊನೆಗೆ ಮಜ್ಜಿಗೆ ಅಥವಾ ಮೊಸರಿನ ಬಳಗೆ ಪ್ರಾಚೀನ ಕಾಲದಿಂದ ಬಂದಿದೆಯಾದರೂ, ಪ್ರೊ ಬಯಾಟಿಕ್ ಎಂಬ ಹೆಸರಿನಲ್ಲಿ ಮೊಸರಿನಲ್ಲಿನ ಅಂಶವಿರುವ ಗುಳಿಗೆ ಬಳಸಲ್ಪಟ್ಟ ನಂತರ ನಾವೂ ಅದರ ಮಹತ್ವವನ್ನು ಮನಗಂಡಿದ್ದೇವೆ. ಹಾಗೆಯೇ ಪ್ರಕೃತಿದತ್ತವಾದ ಸೊಪ್ಪು, ತರಕಾರಿ, ಸಾಂಬಾರ ಪದಾರ್ಥಗಳೂ ಜೀರ್ಣಾಂಗದ ಸಮಸ್ಯೆಗಳನ್ನು ನಿವಾರಿಸಲು ಸಹಕರಿಸುತ್ತವೆ.
ಇವೆಲ್ಲದರಷ್ಟೇ ಮುಖ್ಯವಾದದ್ದೆಂದರೆ ರೋಗಿಯ ಮನೋಸ್ಥಿತಿ. ತನಗೇನೋ ಘನವಾದ ಕಾಯಿಲೆಯಿದೆ ಎಂಬ ಸಂಶಯದ ಕೀಟ ಒಮ್ಮೆ ಮನಸ್ಸನ್ನು ಹೊಕ್ಕರೆ, ಉದರದ ಮಟ್ಟಿಗೆ ಅದು ನಿಜವೇ ಆಗಿ ಬಿಡುತ್ತದೆ. ಎಷ್ಟೆಂದರೆ, ಕೆಲವೊಮ್ಮೆ ಇದಕ್ಕೆ ಮನೋವಿಶ್ಲೇಷಣಾತ್ಮಕ ಚಿಕಿತ್ಸೆಯೇ ಬೇಕಾಗಬಹುದು. ಆದ್ದರಿಂದಲೇ ಹಲವಾರು ರೋಗಿಗಳು ಯೋಗ, ಪ್ರಾಣಾಯಾಮ ಇತ್ಯಾದಿ ಮನೋಶಮನ ಕ್ರಿಯೆಗಳಿಂದ ಉದರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಕ್ತರಾಗುತ್ತಾರೆ.ಆಂತೂ ಈ ಗ್ಯಾಸ್ಟ್ರಿಕ್ ಎಂಬ ಮೂರಕ್ಷರದ ಸಮಸ್ಯೆ
ರೋಗಿಗಳ ಜೊತೆಗೆ ತಜ್ಞರನ್ನು ಕೂಡ ಗೋಳು ಹೊಯ್ದುಕೊಳ್ಳುತ್ತಿರುವುದು ಸುಳ್ಳಲ್ಲ
No comments