Breaking News

ಕೃಷ್ಣ ಮಠದಲ್ಲಿ ಇಫ್ತಾರ್ ಆಚರಣೆ ಖಂಡನೀಯ ಇದು ಹಿಂದುತ್ವವಾದಿಗಳಿಗೆ ಮಾಡಿದ ಅವಮಾನ : ಮುತಾಲಿಕ್ಉಡುಪಿ: ಹಿಂದೂ ಸಂಘಟನೆಗಳು ರಸ್ತೆಗಳಲ್ಲಿ ಜೀವದ ಹಂಗು ತೊರೆದು ಗೋಕಳ್ಳರಿಂದ ಗೋವುಗಳ ರಕ್ಷಣೆ ಮಾಡುತ್ತಿದ್ದರೆ ಅದೇ ಗೋಭಕ್ಷರನ್ನು ದೇವಸ್ಥಾನದ ಒಳಗಡೆ ಕರೆದು ರಂಜಾನ್ ಉಪವಾಸ ಬಿಡಲು ಹಾಗೂ ಇಫ್ತಾರ್ ಆಚರಣೆ ನಡೆಸಲು ಅವಕಾಶ ನೀಡಿದ ಪೇಜಾವರ ಸ್ವಾಮೀಜಿಗಳ ನಡೆ ಖಂಡನೀಯ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್  ಪೇಜಾವರ ಶ್ರೀಗಳ ಜೊತೆ ಚರ್ಚೆ ನಡೆಸಿದರು ನಂತರ ಮಾಧ್ಯಮಗಳೊಂದಿಗೆ ಮಾತಾನಾಡಿದ ಮುತಾಲಿಕ್ ಎರಡು  ದಿನದ ಹಿಂದೆ ಉಡುಪಿ ಜಗತ್ ಪ್ರಸಿದ್ದವಾದ ಶ್ರೀ ಕೃಷ್ಣನ ದೇವಸ್ಥಾನದಲ್ಲಿ ಮುಸ್ಲಿಂರ ಕೊನೆಯ ದಿನವಾದ ರಂಜಾನ್ ಉಪವಾಸದ ಇಫ್ತಾರ್ ಕೂಟವನ್ನು ಮಠದ ಆವರಣದಲ್ಲಿ ಪೇಜಾವರ ಶ್ರೀಗಳು ಮುಸ್ಲಿಂರನ್ನು ಆಹ್ವಾನಿಸಿ ಅವರಿಗೆ ಫಲ ನೀಡಿದ್ದು, ನಮ್ಮ ಹಿಂದು ಸಮಾಜಕ್ಕೆ ಅವಮಾನವಾಗಿದೆ. ಶ್ರೀಕೃಷ್ಣ ಗೋಪಾಲಕರಾಗಿದ್ದು ಗೋಭಕ್ಷರನ್ನು ಗೋಹಂತಕರನ್ನು ಮಠದ ಆವರಣದ ಒಳಗೆ ಕರೆದು ಅವರೊಂದಿಗೆ ಸೌಹಾರ್ದತೆಯ ಮಾತನಾಡುವುದು ಶೋಭೆತರುವಂತದಲ್ಲಿ. ಇಡೀ ಸಮಾಜಕ್ಕೆ ಇದು ಅವಮಾನದ ವಿಷಯವಾಗಿದೆ. ಈ ಕುರಿತು ಅವರೊಂದಿಗೆ ಚರ್ಚೆ ನಡೆಸುವ ಉದ್ದೇಶದಿಂದ ಇಲ್ಲಿಗೆ ನಾನು ಆಗಮಿಸಿದ್ದೇನೆ ಎಂದರು
ಪ್ರತಿಭಟನೆ 
ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್ ಆಚರಿಸಿ ಪೇಜಾವಾರ ಶ್ರೀ ಗಳು ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ  ಈ ಸಂಬಂಧ ಜುಲೈ ೨ ರಂದು ಶ್ರೀ ರಾಮಸೇನಾ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮುತಾಲಿಕ್ ತಿಳಿಸಿದರು .

No comments