ಯುವತಿಯರನ್ನು ಮದುವೆಯಾಗುವುದಾಗಿ ಹೇಳಿ ವಂಚಿಸುತ್ತಿದ್ದ ವಿಕೃತ ಪ್ರೇಮಿ ಸೆರೆ
ಬೆಂಗಳೂರು : ಸಾಫ್ಟ್‌ವೇರ್ ಇಂಜಿನಿಯರ್, ಸರ್ಕಾರಿ ನೌಕರ, ಖಾಸಗಿ ಕಂಪನಿಗಳ ಮಾಲೀಕ ಇನ್ನಿತರ ಉದ್ಯೋಗ ಮಾಡುತ್ತಿರುವ ಶ್ರೀಮಂತನೆಂದು ಹೇಳಿಕೊಂಡು ಮ್ಯಾಟ್ರಿಮೊನಿಯಲ್ ವೆಬ್‌ಸೈಟ್ ಮೂಲಕ 100ಕ್ಕೂ ಹೆಚ್ಚು ಯುವತಿಯರನ್ನು ಮದುವೆಯಾಗುವುದಾಗಿ ವಂಚಿಸಿ ಸುಲಿಗೆ ಮಾಡಿದ್ದ ಐನಾತಿ ವಿಕೃತ ಪ್ರೇಮಿ ಬಾಗಲೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಬಂಧಿತ ಆರೋಪಿಯನ್ನು ಹಾಸನದ ಮಿರ್ಜಾ ಮೊಹಲ್ಲಾ ರಸ್ತೆಯ ಸಾದತ್ ಖಾನ್ (28) ಎಂದು ಗುರುತಿಸಲಾಗಿದೆ . ಈತ ನೂರಾರು ಮಹಿಳೆಯರನ್ನು ನಂಬಿಸಿ 45 ಲಕ್ಷ ರೂ.ಗಳಿಗೆ ಹೆಚ್ಚಿನ ವಂಚನೆ ಮಾಡಿರುವುದು ಪತ್ತೆಯಾಗಿದೆ.
ಆರೋಪಿಯು ಪ್ರೀತಮ್ ಕುಮಾರ್, ರಾಹುಲ್ ಕುಮಾರ್, ಪ್ರೇಮ್ ಸಾಗರ್, ಕಾರ್ತಿಕ್ ಇನ್ನಿತರ ಹೆಸರುಗಳಲ್ಲಿ ಭಾರತ್ ಮ್ಯಾಟ್ರಿಮೊನಿಯಲ್ ಹಾಗೂ ಇನ್ನಿತರ ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳಲ್ಲಿ ಶುಲ್ಕ ಪಾವತಿಸಿ ಸದಸ್ಯನಾಗಿದ್ದನು ಎಂದು ತಿಳಿದು ಬಂದಿದೆ .
No comments