Breaking News

ಕಬ್ಬಿನ ಹಾಲು ಕುಡಿದು ಸೌಂದರ್ಯ ವರ್ಧಿಸಿ



ಕಬ್ಬಿನ ಹಾಲಿನಿಂದ ಆರೋಗ್ಯ ಲಾಭಗಳು ಇವೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ…ಆದರೆ ಕಬ್ಬಿನ ಹಾಲಿನಿಂದ ದೇಹದ ಸೌಂದರ್ಯಕ್ಕೂ ಒಳ್ಳೆಯದು ಎಂದು ಎಷ್ಟು ಜನರಿಗೆ ಗೊತ್ತು. ಸುಡು ಬಿಸಿಲಿಗೆ ಒಂದು ಲೋಟ ಕಬ್ಬಿನ ಹಾಲು ಕುಡಿದರೆ ದೇಹ ತಂಪಾಗುವುದು ಮಾತ್ರವಲ್ಲದೆ, ಆಯಾಸವೆಲ್ಲವೂ ನೀಗಿದಂತೆ ಆಗುವುದು. ತಂಪು ಪಾನೀಯಗಳನ್ನು ಕುಡಿಯುವ ಬದಲಿಗೆ ಕಬ್ಬಿನ ಹಾಲನ್ನು ಕುಡಿದರೆ ಅದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇದೆ.
ಒಣ ಚರ್ಮಕ್ಕೆ ಇದು ಅತೀ ಉತ್ತಮವಾಗಿರುವಂತದ್ದಾಗಿದೆ. ಇದು ತ್ವಚೆಗೆ ತೇವಾಂಶವನ್ನು ನೀಡಿ ನಯವಾಗಿಡುತ್ತದೆ. ಒಣ ಚರ್ಮದ ಸಮಸ್ಯೆಯಿದ್ದರೆ ವಾರದಲ್ಲಿ ಒಂದು ಸಲ ಈ ಪ್ಯಾಕನ್ನು ಬಳಸಿ. ಇದು ಚರ್ಮಕ್ಕೆ ಮಾಯಿಶ್ಚರೈಸ್ ನೀಡುವುದು.  ಅರ್ಥ ಕಪ್ ಕಬ್ಬಿನ ಹಾಲಿಗೆ, ಒಂದೆರಡು ಚಮಚ ಜೇನು ತುಪ್ಪ ಬೆರೆಸಿ, ತ್ವಚೆಗೆ ಫೇಸ್ ಪ್ಯಾಕ್‌ನಂತೆ ಹಚ್ಚಿಕೊಳ್ಳಿ, ತದನಂತರ ಸುಮಾರು ೨೦ ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ… ಈ ವಿಧಾನವನ್ನು ಸುಮಾರು ಎರಡು ವಾರಗಳವರೆಗೆ ಮುಂದುವರೆಸಿ…
ಮುಖದಲ್ಲಿನ ಕಲೆಗಳನ್ನು ನಿವಾರಣೆ ಮಾಡಬೇಕೆಂದರೆ ಇದು ಅತೀ ಉತ್ತಮವಾದ ಪ್ಯಾಕ್ ಆಗಿದೆ. ಬಲಿತ ಪಪ್ಪಾಯಿಯ ತುಂಡುಗಳನ್ನು ತೆಗೆದು ಅದನ್ನು ಕಬ್ಬಿನ ಹಾಲಿನೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ, ತದನಂತರ ೧೫ ನಿಮಿಷ ಬಿಟ್ಟು ಮುಖ ತಣ್ಣೀರಿನಿಂದ ತೊಳೆದುಕೊಳ್ಳಿ
ಇದು ಸತ್ತ ಚರ್ಮಗಳನ್ನು ತೆಗೆದು ಹಾಕಲು ಮಾಡಲ್ಪಡುವಂತಹ ಅತ್ಯುತ್ತಮ ಮನೆಯ ಸ್ಕ್ರಬ್ ಆಗಿದೆ. ಸಕ್ಕರೆಯು ಕೋಶಗಳು ಪುನರುಜ್ಜೀವನಗೊಳ್ಳಲು ನೆರವಾಗುವುದು. ಸ್ವಲ್ಪ ಮಟ್ಟಿನ ಬ್ಲೀಚಿಂಗ್ ಬೇಕಾದರೆ ಇದಕ್ಕೆ ಸ್ವಲ್ಪ ಕಿತ್ತಳೆ ರಸವನ್ನು ಹಾಕಬಹುದು. ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿರುತ್ತದೆ.
ಎಣ್ಣೆಯಂಶವನ್ನು ಹೊಂದಿರುವ ಚರ್ಮದವರಿಗೆ ಇದು ಹೇಳಿ ಮಾಡಿಸಿದ ಪ್ಯಾಕ್ ಆಗಿದೆ. ಮುಲ್ತಾನಿ ಮಿಟ್ಟಿ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ ಮತ್ತು ಕಬ್ಬಿನ ಹಾಲು ಚರ್ಮವು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು.

No comments